ADVERTISEMENT

ಎಸ್‌ಬಿಐ ಸಾಲ ಮೇಳ ಅ 1ರಿಂದ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 16:01 IST
Last Updated 29 ಸೆಪ್ಟೆಂಬರ್ 2022, 16:01 IST
ಎಸ್‌ಬಿಐ
ಎಸ್‌ಬಿಐ   

ಕಲಬುರಗಿ: ನಗರದ ಎಸ್‌ಬಿಐನಿಂದ ಬೃಹತ್ ಪ್ರಮಾಣದ ಮನೆ ಮತ್ತು ಕಾರು ಖರೀದಿಗಾಗಿ ಅಕ್ಟೋಬರ್ 1, 2ರಂದು ಬೆಳಿಗ್ಗೆ 10.30ರಿಂದ ಸಂಜೆ 7.30ರವರೆಗೆ ನಗರದ ಕೋರ್ಟ್ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಭವನದಲ್ಲಿ ಸಾಲ ಉತ್ಸವ ಆಯೋಜಿಸಲಾಗಿದೆ.

ಮೇಳದಲ್ಲಿ ಗೃಹ ನಿರ್ಮಾಣ, ಖರೀದಿ, ನಿವೇಶನ ಖರೀದಿ, ಟಾಪ್‌ ಅಪ್, ಟೇಕ್ ಓವರ್ ಸಾಲ ನೀಡಲಾಗುವುದು. ನಗರದ ಜನತೆ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕಿ ಸುಮಾ ಎಸ್.ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಹಿತಿಗೆ ಶಿವಕುಮಾರ (97396 35634), ಭಗವಂತ (90364 57599) ಅವರನ್ನು ಸಂಪರ್ಕಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.