ADVERTISEMENT

ಕಲಬುರಗಿ: ಎಸ್‌ಬಿಆರ್‌ ಶಾಲೆಗೆ ಶೇ 95.37 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 20 ಮೇ 2022, 5:08 IST
Last Updated 20 ಮೇ 2022, 5:08 IST
ಆದಿತ್ಯ ಮಠಪತಿ99.84
ಆದಿತ್ಯ ಮಠಪತಿ99.84   

ಕಲಬುರಗಿ: ನಗರದ ಶರಣಬಸವೇಶ್ವರ ರೆಸಿಡೆನ್ಸಿಯಲ್ ಪಬ್ಲಿಕ್ ಸ್ಕೂಲ್ (ಎಸ್‌ಬಿಆರ್‌)ನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಅಮೋಘ
ಸಾಧನೆ ಮಾಡಿದ್ದು, ಒಟ್ಟಾರೆ ಶೇ 95.37ರಷ್ಟು ಫಲಿತಾಂಶ ಬಂದಿದೆ ಎಂದು ಶಾಲೆಯ ಪ್ರಾಚಾರ್ಯ ಎನ್‌.ಎಸ್‌. ದೇವರಕಲ್ ತಿಳಿಸಿದ್ದಾರೆ.

87 ವಿದ್ಯಾರ್ಥಿಗಳು ಶೇ 96ಕ್ಕಿಂತ ಅಧಿಕ ಅಂಕಗಳನ್ನು ಪಡೆದಿದ್ದು, 201 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌, 202 ವಿದ್ಯಾರ್ಥಿಗಳು ಪ್ರಥಮ
ಶ್ರೇಣಿ, 21 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ ನಾಲ್ವರು ವಿದ್ಯಾರ್ಥಿಗಳು ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇಂಗ್ಲಿಷ್‌ನಲ್ಲಿ ನಾಲ್ವರು, ಕನ್ನಡ ವಿಷಯದಲ್ಲಿ 43, ಹಿಂದಿಯಲ್ಲಿ 108, ವಿಜ್ಞಾನದಲ್ಲಿ 20, ಗಣಿತದಲ್ಲಿ 28 ಹಾಗೂ ಸಮಾಜ ವಿಜ್ಞಾನದಲ್ಲಿ 84 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ.

ಎಸ್‌ಬಿಆರ್‌ ಅಧ್ಯಕ್ಷರಾದ ಡಾ. ಶರಣಬಸವಪ್ಪ ಅಪ್ಪ ಅವರು ಈ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದು, ಉಜ್ವಲ ಭವಿಷ್ಯಕ್ಕಾಗಿ ಆಶೀರ್ವದಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.