ADVERTISEMENT

ಕಮಲಾಪುರ: ಓದು–ಕೇಳು ಭಾಷಾ ಮೇಳ

30 ಚಟುವಟಿಕೆಗಳ ಮೂಲಕ ಕಲಿಕೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 4:59 IST
Last Updated 18 ಮಾರ್ಚ್ 2022, 4:59 IST
ಕಮಲಾಪುರ ಪಟ್ಟಣದ ಸರ್ಕಾರಿ ಪ್ರಾಯೋಗಿಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ ಓದು–ಕೇಳು ಬಾಷಾ ಮೇಳವನ್ನು ಮಗುವಿನಿಂದ ಗದ್ಯ ಓದಿಸುವ ಮೂಲಕ ಉದ್ಘಾಟಿಸಲಾಯಿತು
ಕಮಲಾಪುರ ಪಟ್ಟಣದ ಸರ್ಕಾರಿ ಪ್ರಾಯೋಗಿಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ ಓದು–ಕೇಳು ಬಾಷಾ ಮೇಳವನ್ನು ಮಗುವಿನಿಂದ ಗದ್ಯ ಓದಿಸುವ ಮೂಲಕ ಉದ್ಘಾಟಿಸಲಾಯಿತು   

ಕಮಲಾಪುರ: ಪಟ್ಟಣದ ಸರ್ಕಾರಿ ಪ್ರಾಯೋಗಿಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಓದು–ಕೇಳು ಬಾಷಾ ಮೇಳ ಜರುಗಿತು.

ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯ ಯೋಜನಾ ಉಪ ನಿರ್ದೇಶಕ ಸಕ್ರಪ್ಪಗೌಡ ಬಿರಾದಾರ ಮಾತನಾಡಿ, ಪೂರ್ವ ಪ್ರಾಥಮಿಕ
ಶಾಲೆ ಮಕ್ಕಳಲ್ಲಿ ಭಾಷಾ ಕೌಶಲ ಹೆಚ್ಚಿಸುವುದು ಅವಶ್ಯ. ಮೊದಲು ಓದುವ ಕೌಶಲಕ್ಕೆ ಒತ್ತು ಕೊಡಬೇಕು. ಪದ ರಚನೆ, ವಾಕ್ಯ ರಚನೆ ಓದಿನಿಂದ ಹಿಡಿದು ದಿನ ಪತ್ರಿಕೆ, ಕಥೆ, ಕವನಗಳನ್ನು ಭಾವಾಭಿವ್ಯಕ್ತಿಯ ಮೂಲಕ ಓದುವುದನ್ನು ಈ
ಹಂತದಲ್ಲೆ ಕಲಿಸಬೇಕು
ಎಂದರು.

ಶಿಕ್ಷಣ ಇಲಾಖೆ ಸಹ ನಿರ್ದೇಶಕ ಜಿ.ಎಂ. ವಿಜಯಕುಮಾರ ಮಾತನಾಡಿದರು.

ADVERTISEMENT

1 ರಿಂದ 5ನೇ ತರಗತಿ ಮಕ್ಕಳ ಓದುವ ಕೌಶಲ್ಯ ಹೆಚ್ಚಿಸಲು ಆಯೋಜಿಸಿದ್ದ ಈ ಮೇಳದಲ್ಲಿ
ಕನ್ನಡ ಮತ್ತು ಇಂಗ್ಲೀಷ ಭಾಷೆಯಲ್ಲಿ ಸರಳ ಪದಗಳ ಓದು, ಸರಳ ವಾಕ್ಯಗಳ ಓದು, ಬಿತ್ತಿ ಪತ್ರ, ದಿನ ಪತ್ರಿಕೆ, ಪಂಚಾಂಗ, ಕಥೆ, ಕವಿತೆ ಓದು, ಮಗುವಿನ ಮನೆ ಭಾಷೆಯಲ್ಲಿ ಕಥೆ ಹೆಳುವುದು ಇಂಗ್ಲೀಷ್‌ ರೈಮ್ಸ್ ಓದು, ಸೈಟ್ ವರ್ಡ್ಸ್‌ ರೀಡಿಂಗ್‌, ಕಾರ್ಡ್‌ ರೀಡಿಂಗ್‌, ಪಿಕ್ಚರ್ ರೀಡಿಂಗ್ ಸೇರಿದಂತೆ ಓದಿಗೆ ಸಂಬಂಧಿಸಿದ
30 ಚಟುವಟಿಕೆಗಳ ಮೂಲಕ ಮಕ್ಕಳ ಓದುಗಾರಿಕೆ ಕೌಶಲ
ಹೆಚ್ಚಿಸಲಾಯಿತು.

ಸರ್ಕಾರಿ ಪ್ರಾಯೋಗಿಕ ಹಿರಿಯ ಪ್ರಾಥಮಿ ಶಾಲೆ, ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ, ಉರ್ದು ಹಿರಿಯ ಪ್ರಾಥಮಿಕ ಶಾಲೆ, ಮೌಲಾನಾ ಆಜಾದ, ವಿಷಯ ಪರಿವೀಕ್ಷಕ ನಾಗೇಂದ್ರಪ್ಪ ಅವರಾದಿ, ಚೌವಾಣ್‌ ಶೆಟ್ಟಿ, ಕ್ಷೇತ್ರ ಸಮನ್ವಯಾಧಿಕಾರಿ ಶಾಂತಾಬಾಯಿ ಬಿರಾದಾರ, ಸಿಆರ್‌ಪಿ ಅಜೀಜ್‌ ಸಾಬ್, ಅಜೀಂ ಪ್ರೇಮಜಿ ಫೌಂಡೇಶನ್‌ ಸಂಪನ್ಮೂಲ ವ್ಯಕ್ತಿ ಗುರನಾಥ ಗೌಡ, ನಿರಂಜನ, ಮುಖ್ಯ ಶಿಕ್ಷಕಿ ನಾಗಮ್ಮ ಮಠ್‌, ಮಹಾನಂದಾ, ಲಾಡ್ಲೆ ಸಾಬ್‌, ರೂಪಾಶ್ರೀ ಗೌರೆ, ನೇತ್ರಾವತಿ ರಾಂಪೂರ, ಶ್ವೇತಾ ಜೀವಣಗಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.