ಪರಿಸರ ಸ್ನೇಹಿ ಗಣೇಶ ಮೂರ್ತಿಗಳು
ಸೇಡಂ: ಪರಿಸರಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತೆ ಯುವಕರ ತಂಡ ಕಳೆದ 5 ವರ್ಷದಿಂದ ನಿರಂತರ ಜಾಗೃತಿ ಮೂಡಿಸುತ್ತಿದೆ.
‘ಮನೆ ಮನೆಗೂ ಮಣ್ಣಿನ ಗಣಪ’ ಎಂಬ ತತ್ವದಡಿ ಸ್ವದೇಶಿ ಸಹಕಾರದಡಿ ಆರಂಭಗೊಂಡ ಜಾಗೃತಿ ಅಭಿಯಾನವೂ ನಿರಂತರವಾಗಿ ಸಾಗಿದ್ದು, ಸೇಡಂನಲ್ಲಿ ಜಾಗೃತಿಯ ಫಲವೂ ಹೆಚ್ಚಳವಾಗಿದೆ.
‘ಸ್ನೇಹಿತರ ಜೊತೆಗೂಡಿ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾನೆಯ ಕಾರ್ಯಕ್ಕೆ ಪ್ರೋತ್ಸಾಹಿಸಬೇಕು ಎಂದು ಸೇಡಂನಲ್ಲಿ 5 ವರ್ಷಗಳ ಹಿಂದೆ ಏಕದಂತ ಸ್ವದೇಶಿ ಅಡಿ ಅಭಿಯಾನ ಆರಂಭಿಸಿದ್ದೇವೆ. ಆರಂಭದಲ್ಲಿ 250 ಗಣೇಶ ತಯಾರಿಸಿದ್ದೇವು. ಮುಂದಿನ ವರ್ಷ ಜಾಗೃತಿಯ ಮೂಡಿಸಿದಾಗ ಹೆಚ್ಚಾದವು. ಪ್ರತಿ ವರ್ಷ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸುವವರ ಸಂಖ್ಯೆ ಹೆಚ್ಚುತ್ತಿದ್ದು, ಈಗ ಸುಮಾರು 1,500 ರಿಂದ 1600 ವರೆಗೆ ಮಾರಾಟವಾಗುತ್ತಿವೆ ಎಂದು ಸಾಮಾಜಿಕ ಕಾರ್ಯಕರ್ತ ರಾಧಾಕೃಷ್ಣ ಕುಲಕರ್ಣಿ ತಿಳಿಸಿದರು.
ಸೇಡಂ ಪಟ್ಟಣದ ಯೂಥ್ ಕ್ಲಬ್ ಬಳಿ ಪರಿಸರ ಸ್ನೇಹಿ (ಮಣ್ಣಿನ ಗಣಪ) ಮೂರ್ತಿ ಮಾರಾಟ ಮಾಡಲಾಗುತ್ತಿದೆ. ನಿತ್ಯ ಅನೇಕರು ಗಣಪತಿ ಮೂರ್ತಿ ಖರೀದಿಸುತ್ತಿದ್ದಾರೆ. ನಮ್ಮಲ್ಲಿ 6 ಇಂಚಿನ ಗಣಪನಿಂದ 4 ಅಡಿ ಎತ್ತರದ ಗಣೇಶ ಮೂರ್ತಿಗಳು ಸಿಗುತ್ತವೆ. ₹80 ರಿಂದ ₹8,000 ವರೆಗೆ ವಿವಿಧ ಮೂರ್ತಿಗಳು ಲಭ್ಯವಿದೆ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಹಾಗೂ ಭಾಸ್ಕರರೆಡ್ಡಿ ಪ್ರಜಾವಾಣಿಗೆ ತಿಳಿಸಿದರು.
ಬಂದ ಆದಾಯ ವಿದ್ಯಾರ್ಥಿಗಳ ಓದಿಗೆ ಬಳಕೆ:
ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮಾರಾಟದಿಂದ ಬಂದ ಹಣವನ್ನು ಪ್ರತಿವರ್ಷ ಇಬ್ಬರು ಬಡ ವಿದ್ಯಾರ್ಥಿಗಳ ನೆರವಿಗೆ ಬಳಸಲಾಗುತ್ತಿದೆ. ಇದು ಇಂದಿಗೂ ನಡೆದಿದ್ದು, ಮಾಡುವ ಕಾರ್ಯದಲ್ಲಿ ನೆಮ್ಮದಿ ಸಂತಸವಿದೆ ಎಂದು ತಿಳಿಸಿದರು.
ಪರಿಸರ ಸ್ನೇಹಿ ಗಣೇಶ ದೊರೆಯುವ ಸ್ಥಳ: ಯೂಥ್ ಕ್ಲಬ್, ತಾ.ಪಂ ಕಚೇರಿ ಪಕ್ಕ, ಮುಖ್ಯ ರಸ್ತೆ ಸೇಡಂ. ಮಾಹಿತಿಗೆ ಮೊ.8880808879 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.