ಅಫಜಲಪುರ(ಕಲಬುರಗಿ ಜಿಲ್ಲೆ): ಗಾಳಿಯಲ್ಲಿ ಗುಂಡು ಹಾರಿಸಿದ್ದ ತಾಲ್ಲೂಕಿನ ಉಡಚಾಣ ಗ್ರಾಮದ ಶಂಕರಲಿಂಗೇಶ್ವರ ಸಂಸ್ಥಾನದ ಹಿರೇಮಠದ ಪೀಠಾಧಿಪತಿ ಶಾಂತಲಿಂಗ ಶಿವಾಚಾರ್ಯ ಅವರನ್ನು ಸೋಮವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.
ಗಾಳಿಯಲ್ಲಿ ಗುಂಡು ಹಾರಿಸಿದ ಸ್ವಾಮೀಜಿ ಅವರನ್ನು ಬಂಧಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಬಳಿಕ ಆವರಣದಲ್ಲಿ ಪಿಎಸ್ಐ ಸೋಮಲಿಂಗ ಒಡೆಯರ್ ಅವರ ನೇತೃತ್ವದ ತಂಡ ಸ್ವಾಮೀಜಿಯನ್ನು ಬಂಧಿಸಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ.
ಗ್ರಾಮದಲ್ಲಿನ ಇನ್ನೊಂದು ಗುಂಪು ಅವರನ್ನು ಬಿಡಿಸಿಕೊಂಡು ಹೋಗಲು ಮಂಗಳವಾರ ಬೆಳಿಗ್ಗೆಯಿಂದ ಪಟ್ಟಣದಲ್ಲಿ ಠಿಕಾಣಿ ಹೂಡಿದೆ.
ಈ ಹಿಂದೆ ಸ್ವಾಮೀಜಿ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಪಾನಮತ್ತರಾಗಿ ಅರೆಬರೆ ಬಟ್ಟೆ ಕಳಚಿಕೊಂಡು ಮಲಗಿಕೊಂಡಿದ್ದರು. ಇದೀಗ ಮತ್ತೆ ಮಠದಲ್ಲಿ ಇದ್ದುಕೊಂಡು ಭಾನುವಾರ ರಾತ್ರಿ ಗಾಳಿಯಲ್ಲಿ ಗುಂಡು ಹಾರಿಸಿ ಸುದ್ದಿಯಲ್ಲಿದ್ದಾರೆ.
ಮಠದ ವಿಚಾರವಾಗಿ ಗ್ರಾಮದಲ್ಲಿ ಎರಡು ಪಂಗಡಗಳಿದ್ದು, ಒಂದು ಗುಂಪು ಸ್ವಾಮೀಜಿ ಅವರನ್ನು ಮಠದಲ್ಲಿ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದರೆ, ಇನ್ನೊಂದು ಗುಂಪು ಅವರನ್ನು ಮಠ ಬಿಟ್ಟು ಹೊರಗೆ ಕಳಿಸಲು ಪ್ರಯತ್ನ ಮಾಡುತ್ತಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.