ADVERTISEMENT

ಶಹಾಬಾದ್ | ಕವಿಗಳು, ಸಾಹಿತಿಗಳಿಗೆ ಬೇಂದ್ರೆ ಸ್ಫೂರ್ತಿ: ವಾಸುದೇವ ಚವ್ಹಾಣ

​ಪ್ರಜಾವಾಣಿ ವಾರ್ತೆ
Published 31 ಜನವರಿ 2025, 13:46 IST
Last Updated 31 ಜನವರಿ 2025, 13:46 IST
ಶಹಾಬಾದ್ ನಗರದ ಚವ್ಹಾಣ್ ಶಿಕ್ಷಣ ಸಂಸ್ಥೆಯ ಎನ್‌ಸಿ ಇಂಗಿಶೆಟ್ಟಿ ಶಾಲೆಯಲ್ಲಿ ವರಕವಿ ದ.ರಾ. ಬೇಂದ್ರೆಯವರ ಜಯಂತಿಯನ್ನು ಆಚರಿಸಲಾಯಿತು
ಶಹಾಬಾದ್ ನಗರದ ಚವ್ಹಾಣ್ ಶಿಕ್ಷಣ ಸಂಸ್ಥೆಯ ಎನ್‌ಸಿ ಇಂಗಿಶೆಟ್ಟಿ ಶಾಲೆಯಲ್ಲಿ ವರಕವಿ ದ.ರಾ. ಬೇಂದ್ರೆಯವರ ಜಯಂತಿಯನ್ನು ಆಚರಿಸಲಾಯಿತು   

ಶಹಾಬಾದ್: ಬೇಂದ್ರೆಯವರು, ಯುವ ಕವಿಗಳು, ಬರಹಗಾರರಿಗೆ ಸ್ಫೂರ್ತಿಯಾಗಿದ್ದಾರೆ. ಸಾಮಾನ್ಯರಿಗೆ ತಿಳಿಯುವಂತೆ ವರಕವಿ ದ.ರಾ. ಬೇಂದ್ರೆ ಅವರು ಮನುಷ್ಯ ಜೀವನದ ಸಾಮಾಜಿಕ ವ್ಯವಸ್ಥೆಯ ವಿವಿಧ ಆಯಾಮಗಳನ್ನು ತಮ್ಮ ಕಾವ್ಯದ ಮೂಲಕ ಬಿಂಬಿಸಿದ್ದಾರೆ’ ಎಂದು ಚವ್ಹಾಣ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಾಸುದೇವ ಚವ್ಹಾಣ ಹೇಳಿದರು.

ನಗರದ ಚವ್ಹಾಣ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶ್ರೀಮತಿ ನಾಗಮ್ಮ ಚನ್ನಪ್ಪ ಇಂಗಿನಶೆಟ್ಟಿ ಶಾಲೆಯಲ್ಲಿ ನಡೆದ ವರಕವಿ ದ.ರಾ. ಬೇಂದ್ರೆ ಅವರ ಜಯಂತಿ ಚಾಲನೆ ನೀಡಿ ಮಾತನಾಡಿದರು.

‘ಬೇಂದ್ರೆ ಅವರ ಸಾಮಾಜಿಕ ಪ್ರಜ್ಞೆ ಕೇವಲ ಕಾವ್ಯದಲ್ಲಿ ಮಾತ್ರವಲ್ಲದೆ, ಎಲ್ಲ ಸಾಹಿತ್ಯದಲ್ಲಿ ಇತ್ತು. ಬೇಂದ್ರೆ ಅವರು ದ್ವಂದ್ವಗಳನ್ನು ಮೀರಿದ ಧೀಮಂತ ಕವಿ. ಅವರು ತೀಕ್ಷ್ಣವಾದ ಸಾಮಾಜಿಕ ವ್ಯವಸ್ಥೆಯನ್ನು ಕಾವ್ಯದ ಮೂಲಕ ಕುಟುಂಬ ಪ್ರಜ್ಞೆ, ದಾಂಪತ್ಯ, ಸಂತಾನ ಪ್ರಜ್ಞೆ, ಗೆಳೆತನದ, ಸಾಮಾಜಿಕ ಪ್ರಗತಿ ಕುರಿತಂತೆ ತಮ್ಮದೇ ಆದ ಶೈಲಿಯ ಮೂಲಕ ಕನ್ನಡದಲ್ಲಿ ತುಂಬಿದ್ದಾರೆ’ ಎಂದು ಹೇಳಿದರು.

ADVERTISEMENT

ಮುಖ್ಯಶಿಕ್ಷಕಿ ಸಂಗೀತಾ ದೇವರಮನಿ ಮಾತನಾಡಿ, ‘ಕವಿ ದಾರ್ಶನಿಕ ಬೇಂದ್ರೆಯವರು ಈ ಯುಗದ ಒಬ್ಬ ಮಹಾಕವಿ. ಕವಿಗಳಿಗೆ, ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ. ಎಲ್ಲ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದು ಹೇಳಿದರು.

ಕಾಳಿಕಾ ಪಾಟೀಲ ನಿರೂಪಿಸಿದರು. ರಂಗಾಯಣ ಕಲಾವಿದ ಹಣಮಂತ ಭಜಂತ್ರಿ, ಪಲ್ಲವಿ, ಆರತಿ ವೆಂಕಟೇಶ, ಜ್ಯೋತಿ ಕುನ್ನೂರಕರ, ಸುಜಾತಾ ಕುಂಬಾರ, ಶಿಕ್ಷಕರು ಸಿಬ್ಬಂದಿ ಪಾಲ್ಗೊಂಡಿದ್ದರು. ಸವಿತಾ ಬೆಳಗುಂಪಿ ಸ್ವಾಗತಿಸಿದರು. ಪಾರ್ವತಿ ಚಟ್ಟಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.