ADVERTISEMENT

ಅಫಜಲಪುರ| ಉಡಚಣದಲ್ಲಿ ಸಂಭ್ರಮದ ಶಂಕರಲಿಂಗೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 8:22 IST
Last Updated 31 ಅಕ್ಟೋಬರ್ 2025, 8:22 IST
ಅಫಜಲಪುರ ತಾಲ್ಲೂಕಿನ ಉಡಚಣ ಗ್ರಾಮದಲ್ಲಿ ಶಂಕರಲಿಂಗೇಶ್ವರ ರಥೋತ್ಸವ ಅಪಾರ ಸಂಖ್ಯೆಯ ಭಕ್ತ ಸಮೂಹದ ಮಧ್ಯೆ ಜರುಗಿತು
ಅಫಜಲಪುರ ತಾಲ್ಲೂಕಿನ ಉಡಚಣ ಗ್ರಾಮದಲ್ಲಿ ಶಂಕರಲಿಂಗೇಶ್ವರ ರಥೋತ್ಸವ ಅಪಾರ ಸಂಖ್ಯೆಯ ಭಕ್ತ ಸಮೂಹದ ಮಧ್ಯೆ ಜರುಗಿತು   

ಅಫಜಲಪುರ: ತಾಲ್ಲೂಕಿನ ಭೀಮಾತೀರದ ಉಡಚಣ ಗ್ರಾಮದಲ್ಲಿರುವ ಶಂಕರಲಿಂಗೇಶ್ವರ ಜಾತ್ರಾ ಮಹೋತ್ಸವವು ಮಠದ ಪೀಠಾಧಿಪತಿ ಶಾಂತಲಿಂಗ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಅಪಾರ ಸಂಖ್ಯೆಯ ಭಕ್ತ ಸಮೂಹದ ಮಧ್ಯೆ ಶ್ರದ್ಧಾ ಭಕ್ತಿಯಿಂದ ಜರುಗಿತು.

ಬೆಳಿಗ್ಗೆ ಗೋಪಾಲ ಕಾವಳಿ ಜರಗಿತು, ನಂತರ ಶಂಕರಲಿಂಗೇಶ್ವರ ಪಲ್ಲಕ್ಕಿ ಮಹೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು. ನಂತರ ಬಂದ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಬಜನಾ ಸಂಘಗಳಿಂದ ಭಜನಾ ಕಾರ್ಯಕ್ರಮಗಳು ಜರುಗಿದವು. ಸಂಜೆ 4 ಗಂಟೆಗೆ ಪುರವಂತರಿಂದ ವಿಶೇಷ ಕಾರ್ಯಕ್ರಮಗಳು ಜರುಗಿದವು.

ನಂತರ 5 ಗಂಟೆಗೆ ವಿವಿಧ ವಾದ್ಯ ವೈಭವಗಳೊಂದಿಗೆ ಅಪಾರ ಸಂಖ್ಯೆಯ ಭಕ್ತ ಸಮೂಹದ ಮಧ್ಯೆ ಶಂಕರಲಿಂಗೇಶ್ವರ ರಥೋತ್ಸವ ಭಕ್ತರ ಜೈ ಘೋಷದ ಮಧ್ಯೆ ಜರುಗಿತು. ನಂತರ ಮದ್ದು ಸುಡುವ ಕಾರ್ಯಕ್ರಮ ಭಕ್ತರ ಮನಸೂರೆಗೊಂಡಿತು, ರಾತ್ರಿ 10.30 ಗಂಟೆಗೆ ಕರ್ನಾಟಕದ ಹಾಸ್ಯ ಕಲಾವಿದ ಹರೀಶ್ ಹಿರಿಯೂರು ಅವರಿಂದ ‘ಹಳ್ಳಿ ಹುಡುಗಿ, ಮೊಸರಿನ ಗಡಿಗಿ’ ಹಾಸ್ಯ ಪ್ರಧಾನ ನಾಟಕ ಜರುಗಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.