ADVERTISEMENT

ಕಲಬುರ್ಗಿ | ಶರಣ ಬಸವೇಶ್ವರ ದರ್ಶನಕ್ಕೆ ಭಕ್ತರ ಸಾಲು

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 6:06 IST
Last Updated 8 ಜೂನ್ 2020, 6:06 IST
ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ನೂರಾರು ಭಕ್ತರು ಸೋಮವಾರ ಸಾಲುಗಟ್ಟಿ ನಿಂತು ದರ್ಶನ ಪಡೆದರು.
ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ನೂರಾರು ಭಕ್ತರು ಸೋಮವಾರ ಸಾಲುಗಟ್ಟಿ ನಿಂತು ದರ್ಶನ ಪಡೆದರು.   

ಕಲಬುರ್ಗಿ: ಇಲ್ಲಿನ ಐತಿಹಾಸಿಕ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ನೂರಾರು ಭಕ್ತರು ಸೋಮವಾರ ಸಾಲುಗಟ್ಟಿ ನಿಂತು ದರ್ಶನ ಪಡೆದರು.

ಈ ಭಾಗದ ಆರಾಧ್ಯ ದೈವ ಶರಣಬಸವೇಶ್ವರರ ಸಮಾಧಿ ದರ್ಶನಕ್ಕೆ ಮೂರು ತಿಂಗಳ ಬಳಿಕ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಬೆಳಿಗ್ಗೆ 6 ಗಂಟೆಯಿಂದಲೇ ಭಕ್ತರು ಬಂದು ಸೇರಿದರು.

ಮುಖ್ಯದ್ವಾರದ ಬಳಿ ನಿರ್ಮಿಸಿದ ವೈರಾಣು ನಾಶಕ ದ್ರಾವಣ ಸಿಂಪಡಣೆ ಸುರಂಗದ ಮೂಲಕವೇ ಪ್ರತಿಯೊಬ್ಬರೂ ಪ್ರವೇಶ ಮಾಡಿದರು. ಗರ್ಭಗುಡಿಯ ಬಳಿ ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳಗೆ ಬಿಡಲಾಯಿತು.

ADVERTISEMENT

ನಸುಕಿನ 5ರಿಂದಲೇ ಪೂಜಾ ಕೈಂಕರ್ಯಗಳು ಆರಂಭವಾದವು. ಆದರೆ ಬೆಳಿಗ್ಗೆ 7ರಿಂದ 10 ಗಂಟೆ ಹಾಗೂ ಸಂಜೆ 4ರಿಂದ ರಾತ್ರಿ 8ರವರೆಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಅತರ ಕಾಯ್ದುಕೊಳ್ಳಲು ಶರಣಬಸವೇಶ್ವರ ಸಂಸ್ಥಾನದ ಸಿಬ್ಬಂದಿಯೇ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.