ADVERTISEMENT

ಚಿಂಚೋಳಿ: ಶೇರಿಭಿಕನಳ್ಳಿ ಸ್ಥಳಾಂತರ ಪ್ರಕ್ರಿಯೆ ಆರಂಭ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 4:16 IST
Last Updated 2 ಜುಲೈ 2022, 4:16 IST
ಚಿಂಚೋಳಿ ತಾಲ್ಲೂಕು ಶೇರಿಭಿಕನಳ್ಳಿಗೆ ಶುಕ್ರವಾರ ತಹಶೀಲ್ದಾರ್‌ ಅಂಜುಮ ತಬಸ್ಸುಮ್ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದರು
ಚಿಂಚೋಳಿ ತಾಲ್ಲೂಕು ಶೇರಿಭಿಕನಳ್ಳಿಗೆ ಶುಕ್ರವಾರ ತಹಶೀಲ್ದಾರ್‌ ಅಂಜುಮ ತಬಸ್ಸುಮ್ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದರು   

ಚಿಂಚೋಳಿ: ತಾಲ್ಲೂಕಿನ ಶೇರಿಭಿಕನಳ್ಳಿ ಸ್ಥಳಾಂತರಿಸುವ ಸಂಬಂಧ ಶುಕ್ರವಾರ ತಾಂಡಾಕ್ಕೆ ತಹಶೀಲ್ದಾರ್ ಅಂಜುಮ ತಬಸ್ಸುಮ ಭೇಟಿ ನೀಡಿ ಪರಿಶೀಲಿಸಿದರು. ‌

ಕುಂಚಾವರಂ ವನ್ಯಜೀವಿಧಾಮದ ಹೃದಯ ಭಾಗದಲ್ಲಿರುವ ಶೇರಿಭಿಕನಳ್ಳಿ ಕಾಡಿನ ಮಧ್ಯದಲ್ಲಿದೆ. ಹಾಗಾಗಿ ಅಲ್ಲಿಗೆ ಹೋಗಿ ಬರಲು ರಸ್ತೆ, ಸಾರಿಗೆ ಮತ್ತು ವಿದ್ಯುತ್ ಸೌಲಭ್ಯಗಳಿಲ್ಲ. ಇದರಿಂದ ಈ ತಾಂಡಾವನ್ನು ಸ್ಥಳಾಂತರಿಸಿ ನಿವಾಸಿಗಳಿಗೆ ಪುನರ್ ವಸತಿ ಕಲ್ಪಿಸುವ ಬೇಡಿಕೆ ಈವರೆಗೂ ಈಡೇರಿಲ್ಲ.

ಇಲ್ಲಿನ ವಾಸ್ತವಿಕ ಮಾಹಿತಿ ಕಲೆ ಹಾಕಲು ಇಲ್ಲಿಗೆ ಭೇಟಿ ನೀಡಿದ ತಹಶೀಲ್ದಾರ್‌ ಅಂಜುಮ ತಬಸ್ಸುಮ ಅವರು, ಗ್ರಾಮಸ್ಥರಿಂದ ಅಭಿಪ್ರಾಯ ಸಂಗ್ರಹಿಸಿದರು. ಜತೆಗೆ ಸ್ಥಳಿಯರ ಕುಂದುಕೊರತೆಗಳು, ಬೇಡಿಕೆಗಳ ಬಗೆಗೂ ಅವರು ಮಾಹಿತಿ ಪಡೆದರು.

ADVERTISEMENT

ಇಲ್ಲಿರುವ ಜನಸಂಖ್ಯೆ, ಕುಟುಂಬಗಳು, ಪಟ್ಟಾ ಜಮೀನು ಹಾಗೂ ಅನಧಿಕೃತ ಸಾಗುವಳಿದಾರರು ಹೀಗೆ ಎಲ್ಲಾ ಮಾಹಿತಿ ಪಡೆದ ತಹಶೀಲ್ದಾರ್‌ ಚಿಂಚೋಳಿಗೆ ಮರಳಿದರು. ಅವರೊಂದಿಗೆ ಕಂದಾಯ ನಿರೀಕ್ಷಕ ರವಿ ಪಾಟೀಲ, ಗ್ರಾಮ ಲೆಕ್ಕಾಧಿಕಾರಿ ಅಮೀರಬಾಬಾ, ಮೊಗ್ದುಮ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.