ADVERTISEMENT

ಎಸ್‌ಡಿಪಿಐ, ಪಿಎಫ್ಐ‌ ನಿಷೇಧಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 16:02 IST
Last Updated 14 ಆಗಸ್ಟ್ 2020, 16:02 IST
ಎಸ್‌ಡಿಪಿಐ ಹಾಗೂ ‍ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಹಿಂದೂ ರಕ್ಷಕ ಶಿವಾಜಿ ಬ್ರಿಗೇಡ್ ಸದಸ್ಯರು ಪ್ರತಿಭಟನೆ ನಡೆಸಿದರು
ಎಸ್‌ಡಿಪಿಐ ಹಾಗೂ ‍ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಹಿಂದೂ ರಕ್ಷಕ ಶಿವಾಜಿ ಬ್ರಿಗೇಡ್ ಸದಸ್ಯರು ಪ್ರತಿಭಟನೆ ನಡೆಸಿದರು   

ಕಲಬುರ್ಗಿ: ’‌ರಾಜ್ಯದಲ್ಲಿ ಕೋಮು ಗಲಭೆಗಳಿಗೆ ಕಾರಣವಾಗಿರುವ ಎಸ್‍ಡಿಪಿಐ ಹಾಗೂ ಪಿಎಫ್ಐ‌ ಸಂಘಟನೆಗಳನ್ನು ನಿಷೇಧಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು‘ ಎಂದು ಹಿಂದೂ ರಕ್ಷಕ ಶಿವಾಜಿ ಬ್ರಿಗೇಡ್‍ನ ಸದಸ್ಯರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

’ಬೆಂಗಳೂರಿನ ಕೆ.ಜೆ. ಹಳ್ಳಿ ಮತ್ತು ಡಿ.ಜೆ.ಹಳ್ಳಿಯಲ್ಲಿ ಮಂಗಳವಾರ ರಾತ್ರಿ ಕೆಲ ಮಂತಾಧರು ಅಮಾಯಕ ಹಿಂದೂಗಳು, ಪೊಲೀಸರ ಹಾಗೂ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಕೆಲವು ಮನೆಗಳು, ಪೊಲೀಸ್ ಸ್ಟೇಷನ್ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಅಪಾರ ಹಾನಿಯಾಗಿದೆ. ಗಲಭೆಯಲ್ಲಿ ಜೀವ ಹಾನಿ ಕೂಡ ಸಂಭವಿಸಿದೆ. ಇಂಥ ಸಂಘಟನೆಗಳನ್ನು ಹಿಂದಿನ ಸರ್ಕಾರಗಳು ಪೋಷಿಸಿಕೊಂಡು ಬಂದಿವೆ‘ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

’ಬೆಂಗಳೂರಿನಲ್ಲಿ ನಡೆದಿದ್ದು ಪೂರ್ವನಿಯೋಜಿತ ಗಲಭೆ. ಈ ಗಲಭೆಗೆ ಎಸ್‍ಡಿಪಿಐ ಸಂಘಟನೆಯ ಅಧ್ಯಕ್ಷನ ಪ್ರಚೋದನೆಕಾರಿ ಭಾಷಣವೇ ಕಾರಣವಾಗಿದೆ. ಅಮಾಯಕ ಹಿಂದೂಗಳ ಮೇಲೆ ಹಲ್ಲೆ ಮಾಡಿದ್ದು, ಮನೆಗಳು ಸುಟ್ಟಿದ್ದು, ಅತ್ಯಂತ ಖಂಡನೀಯ‘ ಎಂದು ಘೋಷಣೆ ಕೂಗಿದರು.

ADVERTISEMENT

’ರಾಜ್ಯದಲ್ಲಿ ಹಲವು ವರ್ಷಗಳಿಂದ ಕೋಮುಗಳನ್ನು ಎಸ್‍ಡಿಪಿಐ, ಪಿಎಫ್ಐ‌ ಸಂಘಟನೆಗಳು ಮಾಡಿಸುತ್ತಿವೆ. ಬೆಂಗಳೂರಿನ ಗಲಭೆಯೇ ಇದನ್ನು ಸಾಬೀತು ಪಡಿಸುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಇಂತಹ ಕೋಮ ಗಲಭೆಗಳನ್ನು ತಡೆಯಲು ಎಸ್‍ಡಿಪಿಐ ಮತ್ತು ಪಿಎïಐ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಮುಖ್ಯಮಂತ್ರಿಗೆ ಬರೆದು ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ನೀಡಿದರು.

ಶಿವಾಜಿ ಬ್ರಿಗೇಡ್‍ನ ಅಧ್ಯಕ್ಷ ಗುರುತಾಂಶ ಟೆಂಗಳಿ, ಸಂತೋಷ ಬೆನಕಹಳ್ಳಿ, ಶಿವರಾಜ ಬಾಳಿ, ಶ್ರೀಶೈಲ ಮೂಲಗೆ, ಧನರಾಜ, ಸುರೇಶ ತಳವಾರ, ಪ್ರಶಾಂತ ಬಡಿಗೇರ, ಗಂಗಾಧರ ವಿಶ್ವಕರ್ಮ, ಸುನೀಲ, ರಾಘು, ಶಿವು ಬಿರಾದಾರ, ಶಿವು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.