
ಅಫಜಲಪುರ: ಇಲ್ಲಿನ ತಾ.ಪಂ ಕಚೇರಿಯಲ್ಲಿ ಗ್ರೇಡ್–1 ಕಾರ್ಯದರ್ಶಿಯಾಗಿದ್ದ ಸಿದ್ದಣ್ಣ ಪತ್ತಾರ(40) ಅವರು ಭಾನುವಾರ ಹೃದಯಾಘಾತದಿಂದ ನಿಧನರಾದರು.
ಅವರು, ಸಿಂದಗಿ ತಾಲ್ಲೂಕಿನ ಸುಂಟ್ಯಾನ ಗ್ರಾಮದವರು. ಮೊದಲು ಆಳಂದ ತಾಲ್ಲೂಕಿನಲ್ಲಿ ಗುಮಾಸ್ತರಾಗಿ ಕೆಲಸ ಮಾಡಿ, 2018ರಲ್ಲಿ ಅಫಜಲಪುರ ತಾ.ಪಂ ಕಚೇರಿಯಲ್ಲಿ ಗ್ರೇಡ್–1 ಕಾರ್ಯದರ್ಶಿಯಾಗಿದ್ದರು.
ಮೃತರರಿಗೆ ಪತ್ನಿ, ಮೂವರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ.
ಭಾನುವಾರ ಬೆಳಗ್ಗೆ ತಾ.ಪಂ ಕಚೇರಿ ಎದುರಿನ ಹೋಟೆಲ್‌ನಲ್ಲಿ ಚಹಾ ಕುಡಿದಿದ್ದಾರೆ. ತಕ್ಷಣವೇ ಸಹಪಾಠಿ ರಮೇಶ ಪಾಟೀಲ ಅವರೊಂದಿಗೆ ಮಾತನಾಡುತ್ತಾ, ‘ನನಗೆ ಎದೆಯಲ್ಲಿ ನೋವಾಗುತ್ತಿದೆ’ ಎಂದು ತಿಳಿಸಿದ್ದಾರೆ. ಪಕ್ಕದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಲಾಯಿತು. ಅಲ್ಲಿ ವೈದ್ಯರು ಅವರಿಗೆ ಹೃದಯ ಬಡಿತ ಹೆಚ್ಚಾಗುತ್ತಿದೆ. ತಕ್ಷಣವೇ ಜಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಎಂದು ತಿಳಿಸಿದರು. ಅಂಬುಲೆನ್ಸ್‌ನಲ್ಲಿ ಜಿಮ್ಸ್‌ಗೆ ತೆರಳುತ್ತಿರುವಾಗ ಮಾರ್ಗ ಮಧ್ಯ ಆತನೂರ ಸಮೀಪ ಮೃತಪಟ್ಟರು ಎಂದು ಸಹಪಾಠಿ ರಮೇಶ ಪಾಟೀಲ ತಿಳಿಸಿದರು.
ಸಿಂದಗಿ ತಾಲ್ಲೂಕಿನ ಸುಂಟ್ಯಾನ ಗ್ರಾಮದಲ್ಲಿ ಭಾನುವಾರ ಸಂಜೆ ಅಂತ್ಯಸಂಸ್ಕಾರ ನೆರವೇರಿತು ಎಂದು ಕುಟುಂಬದವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.