ADVERTISEMENT

ಸಿದ್ಧಸಿರಿ ಕಾರ್ಖಾನೆ: ವಿದ್ಯುತ್‌ ಖರೀದಿಗೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 12:30 IST
Last Updated 3 ಡಿಸೆಂಬರ್ 2021, 12:30 IST
ಚಿಂಚೋಳಿಯ ಸಿದ್ಧಸಿರಿ ಇಥೆನಾಲ್ ಮತ್ತು ಪವರ್ ಕಾರ್ಖಾನೆಯಲ್ಲಿ ನಿತ್ಯ ಉತ್ತಾದನೆಯಾಗಲಿರುವ 30 ಮೆಗಾ ವಾಟ್‌ ವಿದ್ಯುತ್‌ ಖರೀದಿ ಸಂಬಂಧ ಕಾರ್ಖಾನೆ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಅವರು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್‌ ಪಾಂಡ್ವೆ ಜೊತೆ ಚರ್ಚಿಸಿದರು

ಕಲಬುರಗಿ: ಚಿಂಚೋಳಿಯ ಸಿದ್ಧಸಿರಿ ಇಥೆನಾಲ್ ಮತ್ತು ಪವರ್ ಕಾರ್ಖಾನೆಯಲ್ಲಿ ಪ್ರತಿದಿನ ಉತ್ಪಾದನೆಯಾಗಲಿರುವ30 ಮೆಗಾ ವಾಟ್‌ ವಿದ್ಯುತ್‌ ಖರೀದಿಸುವಂತೆ ಕಾರ್ಖಾನೆಯು ಜೆಸ್ಕಾಂಗೆ ಪ್ರಸ್ತಾವ ಸಲ್ಲಿಸಿದೆ.

ವಿಜಯಪುರ ಶಾಸಕರೂ ಆಗಿರುವ ಸಿದ್ಧಸಿರಿ ಸೌಹಾರ್ದ ಸಹಕಾರಿ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಅವರು, ಗುಲಬುರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ)ಯ ಆಡಳಿತ ಕಚೇರಿಗೆ ಶುಕ್ರವಾರ ಭೇಟಿ ನೀಡಿ, ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ ಅವರಿಗೆ ಪ್ರಸ್ತಾವ ಸಲ್ಲಿಸಿದರು.

ಚಿಂಚೋಳಿಯ ಸಿದ್ಧಸಿರಿ ಕಾರ್ಖಾನೆಯಲ್ಲಿ ನಿತ್ಯ ಉತ್ಪಾದನೆಯಾಗಲಿರುವ ವಿದ್ಯುತ್‌ ಖರೀದಿಸಬೇಕು ಎಂಬುದು ಪ್ರಸ್ತಾವದಲ್ಲಿದೆ.

ADVERTISEMENT

ಸಿದ್ಧಸಿರಿ ಸೌಹಾರ್ದ ಸಹಕಾರಿಯ ನಿರ್ದೇಶಕರಾದ ಜಗದೀಶ ಕ್ಷತ್ರಿ, ಪ್ರಭುಗೌಡ ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.