ADVERTISEMENT

ಆಳಂದ: ಕಾಲಿನ ಬೆರಳಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿ

ಜಿಟಿಜಿಟಿ ಮಳೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 2:42 IST
Last Updated 23 ಜುಲೈ 2021, 2:42 IST
ಆಳಂದನ ಸಾವಳೇಶ್ವರ ವಿಶ್ವಸನ್ಮತಿ ಪರೀಕ್ಷಾ ಕೇಂದ್ರದಲ್ಲಿ ಲಕ್ಷ್ಮಿಪುತ್ರ ಮಾಡ್ಯಾಳೆ ತನ್ನ ಕಾಲ ಬೆರಳುಗಳ ನೆರವಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ
ಆಳಂದನ ಸಾವಳೇಶ್ವರ ವಿಶ್ವಸನ್ಮತಿ ಪರೀಕ್ಷಾ ಕೇಂದ್ರದಲ್ಲಿ ಲಕ್ಷ್ಮಿಪುತ್ರ ಮಾಡ್ಯಾಳೆ ತನ್ನ ಕಾಲ ಬೆರಳುಗಳ ನೆರವಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ   

ಆಳಂದ: ತಾಲ್ಲೂಕಿನ ಸಾವಳೇಶ್ವರ ಗ್ರಾಮದ ವಿಶ್ವಸನ್ಮತಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಲಕ್ಷ್ಮಿಪುತ್ರ ಅಮೃತರಾವ ಮಾಡ್ಯಾಳೆ ಕಾಲಿನ ಬೆರಳುಗಳ ಸಹಾಯದಿಂದ ಪರೀಕ್ಷೆ ಬರೆದರು.

ವಿದ್ಯಾರ್ಥಿಯ ಎರಡೂ ಕೈಗಳು ಶಕ್ತಿ ಕಳೆದುಕೊಂಡು, ಮುಂಗೈವರೆಗೆ ಮಾತ್ರ ಬೆಳೆದಿವೆ. ಅಂಗೈ, ಬೆರಳುಗಳು ಇಲ್ಲದ ಲಕ್ಷ್ಮಿಪುತ್ರ ಯಾರ ನೆರವೂ ಪಡೆಯದೇ ತನ್ನ ಕಾಲು ಬೆರಳುಗಳಿಂದ ನೂತನ ಮಾದರಿಯ ಪರೀಕ್ಷೆ ಎದುರಿಸಿದ.

ಕಾಲ ಬೆರಳಿನಿಂದ ಪ್ರಶ್ನೆ ಪತ್ರಿಕೆಯ ಪುಟ ತಿರುವಿ, ಒಎಂಆರ್‌ ಶೀಟ್‌ನಲ್ಲಿ ಗುರುತು ಹಾಕಿದ್ದು ಕೇಂದ್ರಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ, ಸೇರಿದಂತೆ ಇತರ ಸಿಬ್ಬಂದಿಯ ಗಮನ ಸೆಳೆಯಿತು.

ADVERTISEMENT

27 ಕೇಂದ್ರಗಳಲ್ಲಿ ಪರೀಕ್ಷೆ:ಬುಧವಾರ 27 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿಯ ಭಾಷಾ ವಿಷಯಗಳ ಪರೀಕ್ಷೆ ಏಕಕಾಲದಲ್ಲಿ ನಡೆದವು. ಮುಂಜಾನೆಯಿಂದ ಶುರುವಾದ ಜಿಟಿಜಿಟಿ ಮಳೆಯಲ್ಲೇ ವಿದ್ಯಾರ್ಥಿಗಳಿಗೆ ಥರ್ಮಲ್‌ ಸ್ಕ್ರೀನಿಂಗ್ ನಡೆಸಿ, ಮಾಸ್ಕ್ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.