
ಸುರಪುರ: ‘ಫೆ. 10 ಮಂಗಳವಾರ ಕಾಯಕ ಶರಣರ ಜಯಂತಿ ಆಚರಿಸಲಾಗುವುದು’ ಎಂದು ತಹಶೀಲ್ದಾರ್ ಹುಸೇನ್‍ಸಾಬ್ ಸರಕಾವಾಸ್ ಹೇಳಿದರು.
ತಹಶೀಲ್ದಾರ್ ಕಚೇರಿಯಲ್ಲಿ ಜರುಗಿದ ಜಯಂತ್ಯುತ್ಸವ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಎಲ್ಲ ಸರ್ಕಾರಿ ಕಚೇರಿ, ಶಾಲಾ-ಕಾಲೇಜು, ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಕಾಯಕ ಶರಣರ ಜಯಂತಿ ಆಚರಿಸಬೇಕು’ ಎಂದು ತಿಳಿಸಿದರು.
‘ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಜಯಂತಿ ಆಚರಣೆ ಮಾಡಲಾಗುವುದು. ಕಾಯಕ ಶರಣರ ಕುರಿತು ಹಣಮಂತ ಬೊಮ್ಮನಳ್ಳಿ ಉಪನ್ಯಾಸ ನೀಡುವರು. ಎಲ್ಲಾ ಇಲಾಖೆಯ ಅಧಿಕಾರಿಗಳು ಜಯಂತಿಯಲ್ಲಿ ತಪ್ಪದೇ ಪಾಲ್ಗೊಳ್ಳಬೇಕು’ ಎಂದು ಸೂಚಿಸಿದರು.
ದಸಂಸ ಜಿಲ್ಲಾ ಅಧ್ಯಕ್ಷ ಹಣಮಂತ ಕಟ್ಟಿಮನಿ, ವಕೀಲ ಯಲ್ಲಪ್ಪ ಹುಲಿಕಲ್, ಮುಖಂಡರಾದ ನಿಂಗಣ್ಣ ಬುಡ್ಡ ದೀವಳಗುಡ್ಡ, ಚಂದಪ್ಪ ದೊಡ್ಡಮನಿ ದೀವಳಗುಡ್ಡ, ಕೃಷ್ಣ ಲಕ್ಷ್ಮೀಪುರ, ದೇವಿಂದ್ರಪ್ಪ ದೊಡ್ಡಮನಿ, ಭೀಮಪ್ಪ ದೀವಳಗುಡ್ಡ, ಭೀಮಣ್ಣ ತಳ್ಳಳ್ಳಿ, ದುರಗಪ್ಪ ಸಾಯಬಣ್ಣ, ರಾಮಪ್ಪ ಕೋರಿ, ವಿಜಯಕುಮಾರ ಅಡ್ಡೊಡಗಿ, ಬಸವರಾಜ ಹಾದಿಮನಿ, ವಿಜಯಕುಮಾರ, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.