ADVERTISEMENT

ತೌತೆ ಚಂಡಮಾರುತ: ಭಾರಿ ಮಳೆಗೆ 200 ಕ್ವಿಂಟಾಲ್ ಈರುಳ್ಳಿ ನಷ್ಟ

​ಪ್ರಜಾವಾಣಿ ವಾರ್ತೆ
Published 19 ಮೇ 2021, 6:37 IST
Last Updated 19 ಮೇ 2021, 6:37 IST
ಭಾರಿ ಮಳೆಗೆ ನಷ್ಟವಾದ ಈರುಳ್ಳಿ
ಭಾರಿ ಮಳೆಗೆ ನಷ್ಟವಾದ ಈರುಳ್ಳಿ    

ಕಲಬುರ್ಗಿ: ತೌತೆ ಚಂಡಮಾರುತದಿಂದಾಗಿ ಸೋಮವಾರ ಹಾಗೂ ಮಂಗಳವಾರ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯ ‌ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದ ‌ರೈತ ರಮೇಶ ಕಲಶೆಟ್ಟಿ ಅವರು ಬೆಳೆದ 200 ಕ್ವಿಂಟಾಲ್ ನಷ್ಟು ಈರುಳ್ಳಿ ನೀರುಪಾಲಾಗಿದೆ.

ಈರುಳ್ಳಿಯನ್ನು ‌ಕಿತ್ತು ಬೇರೆಡೆ ಸಾಗಿಸಬೇಕೆನ್ನುವಷ್ಟರಲ್ಲಿ ಮಂಗಳವಾರ ಮಧ್ಯಾಹ್ನ ‌ಭಾರಿ ಮಳೆ ಸುರಿಯಿತು. ಇದರಿಂದಾಗಿ ತೋಟದಲ್ಲಿ ಕೆಸರು ತುಂಬಿಕೊಂಡಿದ್ದರಿಂದ ಸಾಗಿಸಲು ‌ಆಗಲಿಲ್ಲ. ಶೇ 75ರಷ್ಟು ಬೆಳೆ ಹಾಳಾಗಿದೆ. ಈ ಬಾರಿ 300 ಕ್ವಿಂಟಲ್ ನಷ್ಟು ಬಂಪರ್ ಬೆಳೆ ಬಂದಿತ್ತು. ಅದರಲ್ಲಿ 200 ಕ್ವಿಂಟಾಲ್ ನೀರು ಪಾಲಾಗಿದೆ. ಶೇ 2ರ ಬಡ್ಡಿ ದರದಲ್ಲಿ ₹ 1.5 ಲಕ್ಷ ‌ಸಾಲ ಮಾಡಿ ಈರುಳ್ಳಿ ಬೆಳೆ ಹಾಕಿದ್ದೆ. ಈಗ ಖರ್ಚು ‌ಮಾಡಿದ ಹಣವೂ ವಾಪಸ್ ಬರುವುದಿಲ್ಲ. ಒಟ್ಟಾರೆ ₹ 8 ಲಕ್ಷ ಸಾಲ ಮಾಡಿದ್ದು, ಏನು‌ ಮಾಡಬೇಕೆಂದು ‌ದಿಕ್ಕು ತೋಚದಾಗಿದೆ ಎಂದು ರೈತ ರಮೇಶ ಕಲಶೆಟ್ಟಿ ‌'ಪ್ರಜಾವಾಣಿ'ಗೆ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT