ADVERTISEMENT

ಕಮಲಾಪುರ:ನಿವೃತ್ತ ಶಿಕ್ಷಕರಿಗೆ ಸನ್ಮಾನ; ‘ಸಮುದಾಯದ ಪ್ರಶಂಸೆಯೇ ದೊಡ್ಡದು’

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 8:00 IST
Last Updated 6 ಸೆಪ್ಟೆಂಬರ್ 2021, 8:00 IST
ಕಮಲಾಪುರ ಸಮೀಪದ ಬೆಳಕೋಟಾ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು
ಕಮಲಾಪುರ ಸಮೀಪದ ಬೆಳಕೋಟಾ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು   

ಕಮಲಾಪುರ: ಶಿಕ್ಷಕರಿಗೆ ಇಲಾಖೆ, ಸಂಘ, ಸಂಸ್ಥೆಗಳು ನೀಡುವ ಪ್ರಶಸ್ತಿಗಿಂತ ಮಕ್ಕಳು, ಪಾಲಕರು, ಸಮುದಾಯ ವ್ಯಕ್ತಪಡಿಸುವ ಪ್ರಶಂಸೆಯೇ ದೊಡ್ಡದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಶರಣಪ್ಪ ಬನ್ನಿಕಟ್ಟಿ ತಿಳಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕಮಲಾಪುರ ತಾಲ್ಲೂಕು ಘಟಕದ ವತಿಯಿಂದ ಭಾನುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಕರ್ತವ್ಯನಿಷ್ಠರಿಗೆ, ಪ್ರಾಮಾಣಿಕರಿಗೆ ಎಲ್ಲಡೆ ಮನ್ನಣೆ ದೊರೆಯುತ್ತದೆ. ನಿಮ್ಮ ವ್ಯಕ್ತಿತ್ವ, ಬೋಧನೆಯ ಗುಣಮಟ್ಟ ಅಳೆಯಲು ಮಕ್ಕಳ ಕಲಿಕೆಯೇ ಮೌಲ್ಯಮಾಪನ. ಶಾಲೆಯ ಭೌತಿಕ ಪರಿಸರ ಸುಧಾರಣೆಯ ಜೊತೆಗೆ ಗುಣಮಟ್ಟದ ಶಿಕ್ಷಣ ಒದಗಿಸಿದರೆ ಮಕ್ಕಳು ಹಾಗೂ ಪಾಲಕರು ನಿಮ್ಮನ್ನ ದೇವರಂತೆ ಕಾಣುತ್ತಾರೆ. ಅದಕ್ಕಿಂತ ದೊಡ್ಡ ಪ್ರಶಸ್ತಿ ಮತ್ತೊಂದಿಲ್ಲ. ಕೋವಿಡ್‌ ನಿಂದ ತಲೆದೋರಿರುವ ಶೈಕ್ಷಣಿಕ ಬಿಕ್ಕಟ್ಟನ್ನು ಸರಿದೂಗಿಸಲು ಸರ್ಕಾರ ನವೀನ ಪ್ರಯೋಗಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಇಲಾಖೆಯ ಜೊತೆಗೆ ಶಿಕ್ಷಕರು ಸಹಕರಿಸಿ ಮಕ್ಕಳ ಏಳಿಗೆಗೆ ಪ್ರಯತ್ನ ಮಾಡಬೇಕು ಎಂದರು.

ADVERTISEMENT

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಮಂಜುನಾಥ ಮಾತನಾಡಿದರು.ನಂತರ ಜಿಲ್ಲಾ ಮಟ್ಟದ ಅತ್ತುತ್ಯಮ ಶಿಕ್ಷಕ ಪ್ರಶಸ್ತಿ ಪಡೆದ ಶಂಕರಲಿಂಗ ಹಿಪ್ಪರಗಿ ,ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು.

ಆಳಂದ ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ, ಉಪ ತಹಶೀಲ್ದಾರ ನಿಸಾರ ಅಹಮ್ಮದ್‌, ಬಿಆರ್‌ಸಿ ಶಾಂತಾಬಾಯಿ ಬಿರಾದಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪರಮೇಶ್ವರ ಓಕಳಿ, ಕಾರ್ಯದರ್ಶಿ ಮಹೆಬೂಬ್‌ ಮಡಕಿ, ಸಂಗ‍ಪ್ಪ ಮರಕುಂದಿ, ರಾಜಶೇಖರ ತಪಲಿ, ಪರಮೇಶ್ವರ ಜಂಬಗಾ, ದಾಸಿಮಯ್ಯ ವಡ್ಡಣಕೇರಿ, ಅಮೃತ್‌ ಸುತಾರ, ಸುನೀಲ ಬೆಡಗೆ, ಮಲ್ಲಿಕಾರ್ಜುನ ಕೋರಿ, ಮಹಾದೇವಿ ಬಿರಾದಾರ, ರೇಣುಕಾರ ಎನ್‌, ಸುನೀತಾ ರೆಡ್ಡಿ, ಸುವರ್ಣಾ ಕಲ್ಯಾಣ, ಮಧುಮಾಲಾ, ಜಗದೀಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.