ADVERTISEMENT

‘ಗುರುವಿನ ಸ್ಥಾನ ದೊಡ್ಡದು’

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 12:27 IST
Last Updated 5 ಫೆಬ್ರುವರಿ 2019, 12:27 IST
ಬಬಲಾದ ಮಠದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಸವರಾಜ ತಂಬೂರಿ ಮಾತನಾಡಿದರು
ಬಬಲಾದ ಮಠದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಸವರಾಜ ತಂಬೂರಿ ಮಾತನಾಡಿದರು   

ಕಲಬುರ್ಗಿ: ‘ಹರ ಮುನಿದರೆ ಗುರು ಕಾಯುವನು. ಜಗತ್ತಿನಲ್ಲಿ ಗುರುವಿನ ಸ್ಥಾನ ಬಹಳ ದೊಡ್ಡದು, ಭವದ ಭಯವನ್ನು ನೀಗಿಸುವವನೇ ಗುರು’ ಎಂದು ಹೆಬ್ಬಾಳ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಸವರಾಜ ತಂಬೂರಿ ಹೇಳಿದರು.

ಭವಾನಿ ನಗರದಲ್ಲಿರುವ ಬಬಲಾದ ಮಠದಲ್ಲಿ ಈಚೆಗೆ ನಡೆದ ಶಿವಾನುಭವ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಯಾರೂ ಕೂಡ ಹುಟ್ಟಿನಿಂದಲೇ ಜ್ಞಾನವಂತರಾಗಿರುವುದಿಲ್ಲ, ಬೆಳೆಯುತ್ತ ಜ್ಞಾನ ಪಡೆಯುತ್ತಾರೆ. ಸತ್ಯವಂತರ, ಸತ್ಸಂಗಿಗಳ ಸಹವಾಸ ವ್ಯಕ್ತಿಯನ್ನು ಶ್ರೇಷ್ಠನನ್ನಾಗಿ ಮಾಡುತ್ತದೆ, ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಉತ್ತಮ ಆಲೋಚನೆ, ವಿಚಾರ ವಿನಿಮಯವು ಪ್ರಬುದ್ಧತೆ ಕಡೆಗೆ ಸಾಗಿಸುತ್ತದೆ’ ಎಂದು ತಿಳಿಸಿದರು.

ADVERTISEMENT

ಪ್ರಾಧ್ಯಾಪಕ ನಾಗರಾಜ ಹೆಬ್ಬಾಳ, ಸಂಚಾಲಕ ಸಂಗಮೇಶ ಹೂಗಾರ ಇದ್ದರು.

ಕವಿತಾ ಎಸ್.ದೇಗಾಂವ ಸ್ವಾಗತಿಸಿದರು. ಶಿಕ್ಷಕ ದೇವಯ್ಯ ಗುತ್ತೇದಾರ ನಿರೂಪಿಸಿ, ವಕೀಲ ಹಣಮಂತರಾಯ ಅಟ್ಟೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.