
ಕಲಬುರಗಿ: ‘ವರ್ಣಗಳ ಸಂಯೋಜನೆಯ ಕಲಾತ್ಮಕತೆಯಲ್ಲಿ ಕಲಾವಿದನ ನೈಪುಣ್ಯ ಅಡಗಿದೆ’ ಎಂದು ಪುಣೆಯ ಕಲಾವಿದ ರಾಮಚಂದ್ರ ಖರಟಮಲ್ ಅಭಿಪ್ರಾಯಪಟ್ಟರು.
ನಗರದ ಶರಣನಗರದಲ್ಲಿರುವ ಸಿತನೂರ ಆರ್ಟ್ ಗ್ಯಾಲರಿಯಲ್ಲಿ ಶನಿವಾರ ಏರ್ಪಡಿಸಿದ್ದ ಕ್ಯಾಮಲ್ ಚಿತ್ರಕಲಾ ಪ್ರದರ್ಶನ, ಪ್ರಾತ್ಯಕ್ಷಿಕೆ ಸಮಾರಂಭದಲ್ಲಿ ಪ್ರಾತ್ಯಕ್ಷಿಕೆ ನೀಡಿ ಅವರು ಮಾತನಾಡಿದರು.
‘ಒಬ್ಬ ಅಪ್ಪಟ ಕಲಾವಿದನಿಗೆ ಹೇಳಿ ಮಾಡಿಸಿದಂತಹ ಕ್ಯಾಮಲ್ ಕಲರ್ ತನ್ನದೇ ಆದ ವೈಶಿಷ್ಟ್ಯವನ್ನು ಪಡೆದಿದೆ’ ಎಂದರು.
ಕೊಕುಯಾ ಕ್ಯಾಮ್ಲಿನ್ ಸಂಸ್ಥೆಯ ವಲಯ ಅಭಿವೃದ್ಧಿ ವ್ಯವಸ್ಥಾಪಕ ನಂದಕುಮಾರ ಗಾಯಕವಾಡ ಮಾತನಾಡಿದರು.
ಹಿರಿಯ ಚಿತ್ರ ಕಲಾವಿದ ಜೆ.ಎಸ್.ಖಂಡೇರಾವ ಕಾರ್ಯಕ್ರಮ ಉದ್ಘಾಟಿಸಿದರು. ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ, ಉದ್ಯಮಿ ಎನ್.ಎ.ಪಾಟೀಲ ವೇದಿಕೆಯಲ್ಲಿದ್ದರು. ಬಸವರಾಜ ಜಾನೆ, ಚಂದ್ರಹಾಸ ಜಾಲಿಹಾಳ್, ಸಂತೋಷ ಅಂದಾನಿ, ಅಶೋಕ ಹಿರೇಮಠ, ಬಿ.ಕೆ.ಬಡಿಗೇರ, ಡಾ.ಅಶೋಕ ಶಟಗಾರ, ಜಿತೇಂದ್ರ ಕೋಥಳಿಕರ, ನಾಗರಾಜ ಕುಲಕರ್ಣಿ, ರಾಜಕುಮಾರ ಕಾಳೆ, ಲಕ್ಷ್ಮಿಕಾಂತ ಮನೋಕರ್, ಡಿ.ಎಸ್.ದೇಸಾಯಿ, ಸಿದ್ದು ಮರಗೋಳ, ಡಾ.ಶಾಹೀದ್ ಪಾಷಾ, ಬಿ.ಎನ್.ಪಾಟೀಲ, ಬಿ.ವಿ.ಕಮಾಜಿ ಇದ್ದರು.
ಎಚ್‌ಕೆಎಸ್ ಎಜಿ ಸಂಸ್ಥಾಪಕ ಟ್ರಸ್ಟಿ ಮೋಹನ್ ಸೀತನೂರ ಸ್ವಾಗತಿಸಿದರು. ಎಂ. ಸಂಜೀವ ನಿರೂಪಿಸಿದರು. ಅಶೋಕ ಶೆಟಕಾರ ವಂದಿಸಿದರು. ರಮೇಶ ಕುಲಕರ್ಣಿ ಪ್ರಾರ್ಥಿಸಿದರು. ಮಾನಯ್ಯ ಬಡಿಗೇರ, ವೀರೇಶ ಪತ್ತಾರ, ನಾರಾಯಣ ಎಂ ಜೋಶಿ, ಕೆ.ಪಿ ಗಿರಿಧರ, ಮೀನಾಕ್ಷಿ ಗುತ್ತೇದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.