ADVERTISEMENT

‘ಉದ್ಯೋಗ ಖಾತ್ರಿಗೆ ಹಣ ಕೊಡದ ಕೇಂದ್ರದ ವಿರುದ್ಧ ಪ್ರಕರಣ’

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 20:08 IST
Last Updated 4 ಅಕ್ಟೋಬರ್ 2019, 20:08 IST
ಚೆನ್ನೈನ ಅರುಣೋದಯಂ ಚಾರಿಟಬಲ್ ಟ್ರಸ್ಟ್‌ನ ಟ್ರಸ್ಟಿ ನಂದಕುಮಾರ್ (ಎಡದಿಂದ ಮೂರನೆಯವರು) ಅವರು ಚೆಕ್‌ ಸ್ವೀಕರಿಸಿದರು. ಎಪಿಡಿ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಕ್ರಿಸ್ಟಿ ಅಬ್ರಹಾಂ, ಕೆ. ಲೀಲಾವತಿ ಮತ್ತು ಅರುಣೋದಯ ಚಾರಿಟಬಲ್ ಟ್ರಸ್ಟ್ ನ ಸದಸ್ಯರಾದ ಜಯಚಿತ್ರಾ ಇದ್ದಾರೆ    ಪ್ರಜಾವಾಣಿ ಚಿತ್ರ
ಚೆನ್ನೈನ ಅರುಣೋದಯಂ ಚಾರಿಟಬಲ್ ಟ್ರಸ್ಟ್‌ನ ಟ್ರಸ್ಟಿ ನಂದಕುಮಾರ್ (ಎಡದಿಂದ ಮೂರನೆಯವರು) ಅವರು ಚೆಕ್‌ ಸ್ವೀಕರಿಸಿದರು. ಎಪಿಡಿ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಕ್ರಿಸ್ಟಿ ಅಬ್ರಹಾಂ, ಕೆ. ಲೀಲಾವತಿ ಮತ್ತು ಅರುಣೋದಯ ಚಾರಿಟಬಲ್ ಟ್ರಸ್ಟ್ ನ ಸದಸ್ಯರಾದ ಜಯಚಿತ್ರಾ ಇದ್ದಾರೆ    ಪ್ರಜಾವಾಣಿ ಚಿತ್ರ   

ಕಲಬುರ್ಗಿ: ‘ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ಎರಡು ವರ್ಷಗಳಿಂದ ಅನುದಾನ ನೀಡಿಲ್ಲ. ಈ ಯೋಜನೆಗೆ ಎಳ್ಳು–ನೀರು ಬಿಡುವ ಹುನ್ನಾರ ನಡೆಸಿದೆ. ಕಾನೂನು ತಜ್ಞರ ಸಲಹೆ ಪಡೆದು ಕೇಂದ್ರದ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಿದ್ದೇನೆ’ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದರು.

‘ಉದ್ಯೋಗ ಖಾತ್ರಿಯು ಗ್ರಾಮೀಣ ಜನರ ಬದುಕಿಗೆ ಆಸರೆಯಾಗುವ ಕಾರ್ಯಕ್ರಮ. ಆದರೆ, ಎರಡು ವರ್ಷಗಳಿಂದ ರಾಜ್ಯಕ್ಕೆ ಬರಬೇಕಾದ ₹ 2,300 ಕೋಟಿ ಬಾಕಿ ಇದೆ. ಸದ್ಯಕ್ಕೆ ರಾಜ್ಯ ಸರ್ಕಾರದ ದುಡ್ಡಿನಲ್ಲೇ ಯೋಜನೆ ಮುಂದುವರಿದಿದೆ. ನಮ್ಮ ಹಣ ಬಳಸಿಕೊಂಡು ಅದಕ್ಕೆ ಪ್ರಧಾನಿ ಹೆಸರು ಹೇಳಿಕೊಂಡು ತಿರುಗುತ್ತಿದ್ದಾರೆ. ಬಡವರ ಹೊಟ್ಟೆ ಮೇಲೆ ಹೊಡೆಯುವ ಕೇಂದ್ರದ ಧೋರಣೆ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡಲು ಅವಕಾಶವಿದೆ. ಆ ಹಕ್ಕನ್ನು ಬಳಸಿಕೊಳ್ಳುತ್ತೇನೆ’ ಎಂದರು. ‘ನೆರೆ ಹಾವಳಿಯಿಂದಾಗಿ ರಾಜ್ಯದ ಬಹುಪಾಲು ಭಾಗ ತತ್ತರಿಸಿಹೋಗಿದೆ. ಇದಾವುದೂ ತಮಗೆ ಸಂಬಂಧವೇ ಇಲ್ಲ ಎಂಬಂತೆ ನಮ್ಮ ಪ್ರಧಾನಿ ವರ್ತಿಸುತ್ತಿದ್ದಾರೆ. ಬಿಹಾರ, ಕೇರಳ ರಾಜ್ಯಗಳಿಗೆ ಮಿಡಿಯುವ ಇವರ ಮನಸ್ಸು ಕರ್ನಾಟಕದ ಮೇಲೇಕೆ ಮಲತಾಯಿ ಧೋರಣೆ ತಾಳುತ್ತಿದೆ’ ಎಂದೂ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT