ADVERTISEMENT

ಸಂಭ್ರಮದ ಜೇವರ್ಗಿ ಯುಗಾದಿ ಉತ್ಸವ

ಮನಸೂರೆಗೊಂಡ ಸಂಗೀತ ಸಂಜೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 5:23 IST
Last Updated 6 ಏಪ್ರಿಲ್ 2022, 5:23 IST
ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ವತಿಯಿಂದ ಜೇರ್ವಗಿಯಲ್ಲಿ ಸೋಮವಾರ ಆಯೋಜಿಸಿದ್ದ ಯುಗಾದಿ ಉತ್ಸವವನ್ನು ಶಾಸಕ ಈಶ್ವರ ಖಂಡ್ರೆ ಉದ್ಘಾಟಿಸಿದರು. ಶಾಸಕ ಅಜಯ್ ಸಿಂಗ್, ಮುರುಘರಾಜೇಂದ್ರ ಶ್ರೀ ಇದ್ದರು
ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ವತಿಯಿಂದ ಜೇರ್ವಗಿಯಲ್ಲಿ ಸೋಮವಾರ ಆಯೋಜಿಸಿದ್ದ ಯುಗಾದಿ ಉತ್ಸವವನ್ನು ಶಾಸಕ ಈಶ್ವರ ಖಂಡ್ರೆ ಉದ್ಘಾಟಿಸಿದರು. ಶಾಸಕ ಅಜಯ್ ಸಿಂಗ್, ಮುರುಘರಾಜೇಂದ್ರ ಶ್ರೀ ಇದ್ದರು   

ಜೇವರ್ಗಿ: ‘ಸಗರನಾಡಿನ ಜೇವರ್ಗಿ ತಾಲ್ಲೂಕು ವಚನಕಾರರು, ತತ್ವಪದಕಾರರು, ಶರಣರು, ಸಂತರು, ದಾರ್ಶನಿಕರು ಬಾಳಿಬೆಳಗಿದ ಪುಣ್ಯ ಭೂಮಿಯಾಗಿದ್ದು, ಇಂತಹ ಕ್ಷೇತ್ರದಲ್ಲಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ನಡೆಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯ ಶ್ಲಾಘನೀಯ’ ಎಂದು ಭಾಲ್ಕಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ಸೋಮಾವಾರ ಸಂಜೆ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದಿಂದ ಅಖಂಡೇಶ್ವರ ಕೃಷಿ ಮಾರುಕಟ್ಟೆ ಸಮಿತಿ ಆವರಣದಲ್ಲಿ ಆಯೋಜಿಸಿದ್ದ ಜೇವರ್ಗಿ ಯುಗಾದಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಲ್ಲರೂ ಕನ್ನಡ ಭಾಷೆ ನಾಡು ನುಡಿ ರಕ್ಷಣೆಗೆ ಮುಂದಾಗಬೇಕಾಗಿದೆ ಎಂದು ಶಾಸಕ ಡಾ.ಅಜಯಸಿಂಗ್ ಹೇಳಿದರು.

ADVERTISEMENT

ಮುಗಳಕೋಡ ಜಿಡಗಾ ಮಠದ ಡಾ.ಮುರುಘರಾಜೇಂದ್ರ ಸ್ವಾಮಿಜಿ, ಸೊನ್ನದ ಡಾ.ಶಿವಾನಂದ ಸ್ವಾಮೀಜಿ, ನೆಲೋಗಿಯ ಸಿದ್ಧಲಿಂಗ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಕರವೇ ರಾಜ್ಯ ಘಟಕದ ಅಧ್ಯಕ್ಷ ಪ್ರವೀಣಕುಮಾರ ಶೆಟ್ಟಿ, ಮಲ್ಲಿನಾಥಗೌಡ ಪಾಟೀಲ ಯಲಗೋಡ, ರಮೇಶಬಾಬು ವಕೀಲ, ಶರಣು ಬಿ. ಗದ್ದುಗೆ, ಶರಣಕುಮಾರ ಮೋದಿ, ಶಿವರಾಜ ಪಾಟೀಲ ರದ್ದೇವಾಡಗಿ, ಅಶೋಕ ಸಾಹು ಗೋಗಿ, ಬಾಲರಾಜ ಗುತ್ತೇದಾರ, ರಾಜಶೇಖರ ಸೀರಿ, ಶಿವಲಿಂಗ್ ಹಳ್ಳಿ, ರಾಜಶೇಖರ ಭಂಟನೂರ, ವಿಜಯಕುಮಾರ ಪಾಟೀಲ ಕಲ್ಲಹಂಗರಗಾ, ಸಕ್ರೆಪ್ಪಗೌಡ ಹರನೂರ, ಸಿದ್ದು ಸಾಹು ಅಂಗಡಿ ಇದ್ದರು.

ರೇವಣಸಿದ್ದಪ್ಪ ಸಂಕಾಲಿ, ವಿಜಯಕುಮಾರ ಹಿರೇಮಠ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ರಮೇಶ ಸಂಗಾ, ವಿಜಯಪುರ ತಹಶೀಲ್ದಾರ ಸಿದ್ದರಾಯ ಭೋಸಗಿ, ಬೀದರ ಸಿಪಿಐ ರಾಮಣ್ಣ ಸಾವಳಗಿ, ರಾಯಚೂರ ಜಿಲ್ಲೆಯ ಆದರ್ಶ ರೈತ ಮಹಿಳೆ ಕವಿತಾ ಮಿಶ್ರಾಳ, ಉದ್ಯಮಿ ಬಾಪುಗೌಡ ಬಿರಾಳ ಅವರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಖಾಸಗಿ ವಾಹಿನಿಯ ಸರಿಗಮಪ ನಿರೂಪಕಿ ಅನುಶ್ರೀ ಹಾಗೂ ಅವರ ಕಲಾ ತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಭಕ್ತಕುಂಬಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.