ADVERTISEMENT

ಐಪಿಹೊಸಳ್ಳಿ-ಸುಲೇಪೇಟದಲ್ಲಿ ಕಂಪನ, ವಿಚಿತ್ರ ಸದ್ದಿನೊಂದಿಗೆ ಉರುಳಿತು ಮನೆ ಗೋಡೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 2:43 IST
Last Updated 17 ಸೆಪ್ಟೆಂಬರ್ 2020, 2:43 IST
ಜನರು ಭಯಭೀತರಾಗಿ‌ ಮನೆಗಳ ಹೊರಗೆ ರಸ್ತೆ ಮೇಲೆ ನಿಂತಿದ್ದರು.
ಜನರು ಭಯಭೀತರಾಗಿ‌ ಮನೆಗಳ ಹೊರಗೆ ರಸ್ತೆ ಮೇಲೆ ನಿಂತಿದ್ದರು.   

ಚಿಂಚೋಳಿ (ಕಲಬುರ್ಗಿ): ತಾಲ್ಲೂಕಿನ ಐಪಿಹೊಸಳ್ಳಿ ಮತ್ತು ಸುಲೇಪೇಟದಲ್ಲಿ ಗುರುವಾರ ಭೂಮಿ ಅದುರಿದ ಅನುಭವವಾಗಿದೆ.

ಐಪಿಹೊಸಳ್ಳಿಯಲ್ಲಿ ಬೆಳಗಿನ 2 ಗಂಟೆಗೆ ಮತ್ತು 6.30ಕ್ಕೆ ಭೂಮಿ ಅದುರಿದಂತಾಗಿ ಸ್ಫೋಟಕ ರೀತಿಯ ಸದ್ದು ಕೇಳಿಸಿದೆ ಎಂದು ಮುಖಂಡ ನವಾಜ್ ಪಟೇಲ ತಿಳಿಸಿದ್ದಾರೆ. ಭೂಮಿ ಅದುರಿದ್ದರಿಂದ ಮನೆಯ ಗೋಡೆಯೊಂದು ಉರುಳಿದೆ ಎಂದು ಅವರು ತಿಳಿಸಿದ್ದಾರೆ.

ತಾಲ್ಲೂಕಿನ ಸುಲೇಪೇಟದಲ್ಲಿ ಬೆಳಗಿನ ಜಾವ 6.50ಕ್ಕೆ ಭೂಮಿ ಅದುರಿದ ಅನುಭವವಾಗಿದೆ. ಬೆಳಿಗ್ಗೆ‌ ಎದ್ದು ಮನೆಯಲ್ಲಿನ ದಿವಾನದ ಮೇಲೆ ಕುಳಿತಾಗ ಭೂಮಿ ಅದುರಿದ ಅನುಭವವಾಯಿತು ನಮ್ಮ‌ಮನೆಯವೆಲ್ಲಾ ಸದಸ್ಯರು ಹಾಗೂ ನೆರೆಹೊರೆಯವರು ಇದು ಖಾತ್ರಿಪಡಿಸಿದರು ಎಂದು ಸುಲೇಪೇಟದ ಉದ್ಯಮಿ ಮಹಾರುದ್ರಪ್ಪ ದೇಸಾಯಿ ಪ್ರಜಾವಾಣಿಗೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.