
ಸೇಡಂ: ಪ್ರಸ್ತುತ ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಮಾರು ಹೋಗುತ್ತಿರುವುದರಿಂದ ವಚನ ಸಾಹಿತ್ಯದ ಜ್ಞಾನದ ಕಡಿಮೆಯಾಗುತ್ತಿದೆ. ಪಾಲಕರು ಮಕ್ಕಳಿಗೆ ಶರಣರ ವಚನ ಜ್ಞಾನ ನೀಡಬೇಕು’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ತಾಲ್ಲೂಕಿನ ಮುನಕನಪಲ್ಲಿ ಗ್ರಾಮದಲ್ಲಿ ಶನಿವಾರ ನಡೆದ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತ್ಯುತ್ಸವ, ಹಾಗೂ ಕೋಲಿ ಸಮಾಜದ ಜನ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
‘ವಚನ ಸಾಹಿತ್ಯಕ್ಕೆ ಹಿಂದುಳಿದ ಸಮುದಾಯದ ಕೊಡುಗೆ ಸಿಂಹಪಾಲಿದೆ. ಅದರಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳು ನೇರ ಮತ್ತು ನಿಷ್ಠುರವಾಗಿದ್ದವು. ವಚನ ಸಾಹಿತ್ಯದ ಮೂಲಕ ಮುನುಕುಲಕ್ಕೆ ತತ್ವ ಸಂದೇಶ ನೀಡಿದ್ದಾರೆ ಎಂದರು.
ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಮಾತನಾಡಿ, ‘ನಿಜಶರಣ ಅಂಬಿಗರ ಚೌಡಯ್ಯನವರು ಸಮಾಜಕ್ಕೆ ಕೊಟ್ಟ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.
ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯಾಧ್ಯಕ್ಷ ದತ್ತಾತ್ರೆಯ ಮುದಿರಾಜ ಮಾತನಾಡಿ, ‘ನಿಜಶರಣ ಅಂಬಿಗರ ಚೌಡಯ್ಯ ಅವರು ಕೇವಲ ಒಂದು ಸಮಾಜಕ್ಕೆ ಸೀಮಿತವಲ್ಲ. ಅವರ ಚಿಂತನೆ ಮನುಕುಲಕ್ಕೆ ದಾರಿದೀಪ. ಕೋಲಿ ಸಮಾಜವನ್ನು ಸಂಘಟನಾತ್ಮಕವಾಗಿ ಬಲಗೊಳ್ಳಬೇಕಿದೆ’ ಎಂದರು.
ಪರಗಿಯ ಕೃಷ್ಣಾನಂದ ಸ್ವಾಮೀಜಿ, ಗುಂಡೆಪಲ್ಲಿಯ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ, ನಾಗೂರಿನ ಅಲ್ಲಮ ಸ್ವಾಮೀಜಿ, ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ, ಮುಖಂಡ ಶಿವಶರಣಪ್ಪ ಕೂಬಾ, ಬಾಲಭವನ ನಿಗಮ ಅಧ್ಯಕ್ಷ ಅನೀಲಕುಮಾರ ಜಮಾದಾರ ಮಾತನಾಡಿದರು.
ಜಾಕನಪಲ್ಲಿ ಅಭಿನವ ಗವಿ ಸಿದ್ದೇಶ್ವರ ಶಿವಾಚಾರ್ಯ, ಇಂದಿರಾ ಶಕ್ತಿ, ರವೀಂದ್ರ ನಂದಿಗಾಮ, ಸಿದ್ರಾಮಪ್ಪ ಸಣ್ಣೂರ, ಶರಣಪ್ಪ ಪರಿಗೇಡ, ಭೀಮರೆಡ್ಡಿ ಜಿಲ್ಲೆಡಪಲ್ಲಿ, ಸತೀಶರೆಡ್ಡಿ ರಂಜೋಳ, ಭೀಮಾಶಂಕರ ಕೊಳ್ಳಿ, ಭೀಮಶಪ್ಪ ಮುನಕನಪಲ್ಲಿ, ಭೀಮರಾಯ ಹಣಮನಳ್ಳಿ, ಸುನಿತಾ ತಳವಾರ, ಜಗನ್ನಾಥ ಬೆಡಕಪಳ್ಳಿ, ಆಶಪ್ಪ ತೆಲ್ಕಾಪಲ್ಲಿ, ಬಸವರಾಜ ಪೊ.ಪಾಟೀಲ, ನಾಗಪ್ಪ ಸಿ.ತಳವಾರ, ರಮೇಶ ರಾಘಾಪುರ, ಅಶೋಕ ಕುಂಬಾರ ಇದ್ದರು.
ಸಮಿತಿ ಅಧ್ಯಕ್ಷ ಭೀಮಶಪ್ಪ ನಾಯಿಕೋಡಿ ಸ್ವಾಗತಿಸಿದರು. ಮಹಾದೇವ ನಾಯಿಕೋಡಿ ಪ್ರಾಸ್ತಾವಿಕ ಮಾತನಾಡಿದರು. ಮಹಾದೇವ ಗೋಣಿ ನಿರೂಪಿಸಿದರು. ಅಶೋಕ ಕುಂಬಾರ ವಂದಿಸಿದರು.
ಎಸ್‌ಟಿ ಸೇರ್ಪಡೆ ಶಿಫಾರಸ್ಸಿಗೆ ಪ್ರಯತ್ನ
ಕೋಲಿ ಸಮಾಜವನ್ನು ಎಸ್‌ಟಿ ಗೆ ಸೇರಿಸುವ ನಿಟ್ಟಿನಲ್ಲಿ ತಾಲ್ಲೂಕಿನ ಯಾನಾಗುಂದಿಯಲ್ಲಿ ಸಮಾವೇಶ ಮಾಡಿತ್ತು. ಆಗಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಮತ್ತೊಮ್ಮೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಒಪ್ಪಿದ್ದಾರೆ. ಕೆಲವು ಪರ್ಯಾಯ ಪದಗಳನ್ನು ತೆಗೆದು ಕಳಿಸಿದ್ದಲ್ಲಿ ಕೇಂದ್ರ ಒಪ್ಪುವಂತಹ ಅಭಿಪ್ರಾಯವಿದೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.