ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ಪದಾಧಿಕಾರಿಗಳ ಪಟ್ಟಿ ಎನ್ನಲಾದ ಪ್ರತಿಯನ್ನು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿನ ಚುನಾವಣಾಧಿಕಾರಿ ಕಚೇರಿಯ ಗೋಡೆಗೆ ಅಂಟಿಸಲಾಗಿತ್ತು. ಪಟ್ಟಿಗೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಗೆ ಬೆಂಕಿ ಹಚ್ಚಲಾಗಿದೆ.
ಶರಣು ಮೋದಿ ಜಿಲ್ಲಾಧ್ಯಕ್ಷರು ಸೇರಿದಂತೆ 20 ಜನರು ಜಿಲ್ಲಾ ಕಾರ್ಯಕಾರಿಣಿಗೆ, ಮಹಿಳಾ ಕಾರ್ಯಕಾರಣಿಗೆ 10, ಕಲಬುರಗಿ ತಾಲ್ಲೂಕು ಘಟಕಕ್ಕೆ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯಾಧ್ಯಕ್ಷ ಸೇರಿ 16 ಪದಾಧಿಕಾರಿಗಳು ಹಾಗೂ ತಾಲ್ಲೂಕು ಮಹಿಳಾ ಘಟಕಕ್ಕೆ ಏಳು ಜನರನ್ನು ಆಯ್ಕೆ ಮಾಡಲಾಗಿದೆ ಎಂದು ನೋಟಿಸ್‌ನಲ್ಲಿ ಅಂಟಿಸಲಾಗಿತ್ತು.
ಪದಾಧಿಕಾರಿಗಳ ಪಟ್ಟಿಯಲ್ಲಿ ತಾರತಮ್ಯ ಮಾಡಲಾಗಿದ್ದು, ಅವಿರೋಧ ಆಯ್ಕೆ ವೇಳೆ ನಿರ್ಧರಿಸಿದಂತೆ ಎಲ್ಲರಿಗೂ ಆದ್ಯತೆ ನೀಡಿಲ್ಲ ಎಂದು ಆರೋಪಿಸಿದ ಪದಾಧಿಕಾರಿಯೊಬ್ಬರೂ, ಪದಾಧಿಕಾರಿಗಳ ಪಟ್ಟಿಗೆ ಬೆಂಕಿ ಇಟ್ಟು ಆಕ್ರೋಶ ಹೊರಹಾಕಿದ್ದಾರೆ.
‘ನಾನು ಕಣದಿಂದ ಹಿಂದೆ ಸರಿಯುವ ಸಂದರ್ಭದಲ್ಲಿ ಹಿರಿಯರ ಸಲಹೆಯಂತೆ ನನ್ನ ಪೆನಲ್‌ನ ಸದಸ್ಯರನ್ನು ಸಮಿತಿಯಲ್ಲಿ ಸೇರ್ಪಡೆ ಮಾಡಿಕೊಳ್ಳುವುದಾಗಿ ಮಹಾಸಭಾ ಅಧ್ಯಕ್ಷ ಶರಣು ಮೋದಿ ಅವರು ಭರವಸೆ ನೀಡಿದ್ದರು. ಅದರಂತೆ ನಾನು 15 ಜನರ ಪಟ್ಟಿ ಕೊಟ್ಟರೆ ಅವರಲ್ಲಿ ಬಹುತೇಕರನ್ನು ಸೇರ್ಪಡೆ ಮಾಡಿಕೊಂಡಿಲ್ಲ’ ಎಂದು ಶಶಿಕಾಂತ ಪಾಟೀಲ ಬೇಸರ ವ್ಯಕ್ತಪಡಿಸಿದರು.
ಮಹಾಸಭಾ ಚುನಾವಣೆಗೆ ಮತ್ತೊಮ್ಮೆ ಚುನಾವಣೆ ನಡೆಸಬೇಕು ಎಂಬುದು ಸಮಾಜದ ಹಲವು ಮುಖಂಡರ ಒತ್ತಾಯವಾಗಿದೆ ಎಂದು ಮುಖಂಡ ಎಂ.ಎಸ್. ಪಾಟೀಲ ನರಿಬೋಳ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.