ADVERTISEMENT

ಮಹಾಸಭಾ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಚುನಾವಣೆ: ಜಿಲ್ಲೆಯ ಮೂವರಿಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2024, 6:21 IST
Last Updated 28 ಆಗಸ್ಟ್ 2024, 6:21 IST
ಕಲಬುರಗಿಯಲ್ಲಿ ಮಂಗಳವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯ ಕಾರ್ಯನಿರ್ವಾಹಕ ಸದಸ್ಯರಾಗಿ ಆಯ್ಕೆಯಾದ ಸಂತೋಷ ಪಾಟೀಲ ಹಾಗೂ ರಾಜಶೇಖರ ಸೀರಿ ಅವರನ್ನು ಸನ್ಮಾನಿಸಿದ ಮುಖಂಡರು
ಕಲಬುರಗಿಯಲ್ಲಿ ಮಂಗಳವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯ ಕಾರ್ಯನಿರ್ವಾಹಕ ಸದಸ್ಯರಾಗಿ ಆಯ್ಕೆಯಾದ ಸಂತೋಷ ಪಾಟೀಲ ಹಾಗೂ ರಾಜಶೇಖರ ಸೀರಿ ಅವರನ್ನು ಸನ್ಮಾನಿಸಿದ ಮುಖಂಡರು   

ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯ ಘಟಕದ ಕಾರ್ಯನಿರ್ವಾಹಕ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿಲ್ಲೆಯ ಸಂತೋಷ ಪಾಟೀಲ, ರಾಜಶೇಖರ ಸೀರಿ ಹಾಗೂ ಶಶಿಕಾಂತ ಪಾಟೀಲ ಅವರು ಗೆಲುವು ಸಾಧಿಸಿದ್ದಾರೆ.

ಕಾರ್ಯನಿರ್ವಾಹಕ ಸಮಿತಿಯ 27 ಸ್ಥಾನಗಳಿಗೆ 57 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಆ.25ರಂದು ಮತದಾನ ನಡೆದಿತ್ತು. ಒಟ್ಟು 31 ಜಿಲ್ಲೆಗಳ 31,145 ಮತಗಳಲ್ಲಿ 18,016 ಮತ ಚಲಾವಣೆ ಆಗಿದ್ದವು. ಶಶಿಕಾಂತ ಪಾಟೀಲ 11,482, ಸಂತೋಷ ಪಾಟೀಲ 11,321 ಹಾಗೂ ರಾಜಶೇಖರ ಸೀರಿ 11,172 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿದ್ದಾರೆ.

ಗೆಲುವಿನ ಬಳಿಕ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷ ಶರಣಕುಮಾರ ಮೋದಿ ನೇತೃತ್ವದಲ್ಲಿ ಜಗತ್ ವೃತ್ತದಲ್ಲಿನ ಬಸವಣ್ಣನವರ ಮೂರ್ತಿಗೆ ಮುಖಂಡರು ಮಾಲಾರ್ಪಣೆ ಮಾಡಿದರು.

ADVERTISEMENT

ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಏಳಿಗೆಗೆ ಮತ್ತು ಒಗ್ಗಟ್ಟಿಗಾಗಿ ಸಂಘಟನೆ ಬಲಪಡಿಸುವಂತೆ ನೂತನವಾಗಿ ಆಯ್ಕೆಯಾದ ಸದಸ್ಯರು ಶ್ರಮಿಸಬೇಕು ಎಂದು ಮೋದಿ ಹೇಳಿದ್ದಾರೆ.

ಶಾಸಕ ಅಲ್ಲಮಪ್ರಭು ಪಾಟೀಲ ಶುಭ ಕೋರಿದರು. ಸಮಾಜದ ಹಿರಿಯರಾದ ಮಲ್ಲಿಕಾರ್ಜುನ ಖೇಮಜಿ, ಶಿವಾನಂದ ಪಾಟೀಲ ಮರತೂರ, ವೈಜನಾಥ ತಡಕಲ್, ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರಾದ ಭೀಮಾಶಂಕರ ಮೇಟೆಕಾರ, ಶಾಂತಕುಮಾರ ದುಧನಿ, ಉದಯಕುಮಾರ ಜೇವರ್ಗಿ, ಜ್ಯೋತಿ ಮರಗೋಳ ಸೇರಿ ಸಮಾಜದ ಮುಖಂಡರಾದ ರಾಜಕುಮಾರ ಪಾಟೀಲ, ಆನಂದ ಪಾಟೀಲ, ರವಿಕುಮಾರ ಪಾಟೀಲ, ಈರಣಗೌಡ, ಶರಣಗೌಡ ಪಾಟೀಲ, ಸಿದ್ದು ಬಾಳಿ, ನೀಲಕಂಠ ಪಾಟೀಲ, ಸಂಗನಗೌಡ ಗುಳ್ಯಾಳ, ನೀಲಕಂಟ ಅವಂಟಿ, ಮಲ್ಲಣಗೌಡ ನೇದಲಗಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.