ADVERTISEMENT

ವಿಕೆಜಿ ನಗರಕ್ಕೆ ನಾಮಕರಣ ವಿಚಾರ: ಐವರ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 4:11 IST
Last Updated 5 ಫೆಬ್ರುವರಿ 2026, 4:11 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

ಸಾಂದರ್ಭಿಕ ಚಿತ್ರ

ಅಫಜಲಪುರ: ತಾಲ್ಲೂಕಿನ ಮಾಶಾಳ ಗ್ರಾಮದ ವಿಕೆಜಿ ನಗರವನ್ನು ಕಂದಾಯ ಗ್ರಾಮ ಮಾಡಿ ಅದಕ್ಕೆ ಗೊಲ್ಲಾಳೇಶ್ವರ ಇಲ್ಲವೇ ಭವಾನಿ ನಗರ ಎಂದು ಮರುನಾಮಕರಣ ಮಾಡುವ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ಮಧ್ಯೆ ವಿವಾದ ಉಂಟಾಗಿದೆ.

ADVERTISEMENT

ಈ ವಿಚಾರವಾಗಿ ಬಿಜೆಪಿ ಮುಖಂಡ ವಿಶ್ವನಾಥ ರೇವೂರ್ ಸೇರಿದಂತೆ ಅವರ ಕುಟುಂಬದ ಐವರ ಮೇಲೆ ಮಂಗಳವಾರ ಸಂಜೆ ಮಾಶಾಳ ಗ್ರಾಮದ ಕಾಂಗ್ರೆಸ್ ಮುಖಂಡರಾದ ಶಿವಪುತ್ರ ಜಿಡಗಿ ಹಾಗೂ ವಿಜಯಕುಮಾರ್ ಪ್ರಧಾನಿ ಅವರು ಅಫಜಲಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಾಶಾಳ ಗ್ರಾಮದಲ್ಲಿ ವಿಕೆಜಿ ಗ್ರಾಮ ನಿರ್ಮಾಣವಾಗಲು ಕಾರಣಕರ್ತರಾದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಅವರು ಬಡವರಿಗಾಗಿ 70 ಮನೆಗಳನ್ನು ಮಂಜೂರು ಮಾಡಿ ಗ್ರಾಮದ ಹೊರಗಡೆ ಇರುವ ನಿವೇಶನದಲ್ಲಿ ಮನೆಗಳನ್ನು ನಿರ್ಮಾಣ ಮಾಡಿ ಅದಕ್ಕೆ ವಿಕೆಜಿ ನಗರವೆಂದು ನಾಮಕರಣ ಮಾಡಿದ್ದರು.

ಕಾಂಗ್ರೆಸ್ ಮುಖಂಡರಾದ ಶಿವಪುತ್ರಪ್ಪ ಜಿಡಗಿ ಹಾಗೂ ವಿಜಯಕುಮಾರ್ ಪ್ರಧಾನಿ ಸೇರಿದಂತೆ ಹಲವರು ವಿಕೆಜಿ ನಗರವನ್ನು ಕಂದಾಯ ಗ್ರಾಮವನ್ನಾಗಿ ಮಾಡಿ ಅದಕ್ಕೆ ಗೊಲ್ಲಾಳೇಶ್ವರ ಇಲ್ಲವೇ ಭವಾನಿ ನಗರ ಎಂದು ನಾಮಕರಣ ಮಾಡಲು ತಹಶೀಲ್ದಾರ್‌ ಅವರಿಗೆ ಅರ್ಜಿ ನೀಡಿದ್ದರು. ಅರ್ಜಿ ವಿಚಾರಣೆಗಾಗಿ ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡಿದಾಗ ಎರಡೂ ಪಕ್ಷಗಳ ಮುಖಂಡರ ಮಧ್ಯೆ ವಿವಾದವಾಗಿ ಕೊನೆಗೆ ಪೊಲೀಸ್ ಠಾಣೆ ಮೆಟ್ಟಲೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.