
ವಾಡಿ: ರಾಷ್ಟ್ರೀಯ ಹೆದ್ದಾರಿ 150ರ ಬಳಿರಾಮ್ ಚೌಕ್ ರೈಲ್ವೆ ಕ್ರಾಸಿಂಗ್ ಸಮಸ್ಯೆ ಹೆಚ್ಚುತ್ತಿದ್ದು, ಲೆವಲ್ ಕ್ರಾಸಿಂಗ್‌ನಲ್ಲಿ ಹಳಿಗಳು ರಸ್ತೆಗೆ ಸಮತಟ್ಟು ಇಲ್ಲದ ಕಾರಣ ವಾಹನ ಸವಾರರು ಕಷ್ಟಪಡುವಂತಾಗಿದೆ.
ಕಾರು, ಆಟೋ, ಬೈಕ್‌ಗಳ ತಳಭಾಗಕ್ಕೆ ಹಳಿಗಳು ತಾಗಿ ಹಾನಿ ಉಂಟಾಗುತ್ತಿದೆ. ಕಾರು ಮತ್ತು ಟಂಟಂ ಗಳ ಬಿಡಿಭಾಗ ಮುರಿದಿವೆ. ವಾಹನ ಸವಾರರು ನಿಧಾನವಾಗಿ ಮತ್ತು ಎಚ್ಚರಿಕೆಯಿಂದ ಹಳಿಗಳನ್ನು ದಾಟಬೇಕಾಗಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ.
ರೈಲ್ವೆ ಇಲಾಖೆಯು ನಿಯಮಿತವಾಗಿ ಲೆವೆಲ್ ಕ್ರಾಸಿಂಗ್‌ನ್ನು ಪರಿಶೀಲಿಸಿ, ರಸ್ತೆಯ ಮೇಲ್ಮೈಯನ್ನು ಹಳಿಗಳ ಮಟ್ಟಕ್ಕೆ ಸರಿಹೊಂದಿಸಿ ದುರಸ್ತಿ ಮಾಡದೆ ಬೇಜವಾಬ್ದಾರಿ ತೋರುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2ನೇ ಹಂತದ ಮೇಲ್ಸೇತುವೆ ಕಾಮಗಾರಿ ಆರಂಭವಾಗಿದ್ದು ಕೆಲಸ ಮಾತ್ರ ಅಮೆಗತಿಯಲ್ಲಿ ಸಾಗುತ್ತಿದೆ. ಸಾರ್ವಜನಿಕರು ಇನ್ನೆಷ್ಟು ದಿನ ಸಮಸ್ಯೆ ಎಸುರಿಸಬೇಕು. ರೈಲ್ವೆಹಳಿ ಮತ್ತು ರಸ್ತೆಯನ್ನು ತಾತ್ಕಾಲಿಕ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.