ADVERTISEMENT

ಹಬ್ಬ ಮುಗಿದ ಬಳಿಕ ಕಸದ ಗುಡ್ಡೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 16:07 IST
Last Updated 17 ನವೆಂಬರ್ 2020, 16:07 IST
ಕಲಬುರ್ಗಿಯ ಶರಣಬಸವೇಶ್ವರ ಕೆರೆ ಆವರಣದಲ್ಲಿ ಬಿಸಾಡಿದ ಪೂಜಾ ಸಾಮಗ್ರಿಗಳು
ಕಲಬುರ್ಗಿಯ ಶರಣಬಸವೇಶ್ವರ ಕೆರೆ ಆವರಣದಲ್ಲಿ ಬಿಸಾಡಿದ ಪೂಜಾ ಸಾಮಗ್ರಿಗಳು   

ಕಲಬುರ್ಗಿ: ಕಳೆದ ನಾಲ್ಕು ದಿನಗಳಿಂದ ದೀಪಾವಳಿ ಹಬ್ಬದ ಸಡಗರದಲ್ಲಿ ಮಿಂದೆದ್ದ ನಗರದಲ್ಲಿ ಈಗ ಕಸದ ಗುಡ್ಡೆ ನಿರ್ಮಾಣವಾಗಿದೆ. ಹಬ್ಬಕ್ಕೆ ಬಳಸಿದ ಪೂಜಾ ಸಾಮಗ್ರಿಗಳು, ಪಟಾಕಿ ಬಾಕ್ಸ್‌ಗಳು, ತೆಂಗಿನ ಗರಿ, ಬಾಳೆದಿಂಡು ಸೇರಿದಂತೆ ದೀಪಾವಳಿ ಸಡಗಕ್ಕೆ ಬಳಸಿದ ಎಲ್ಲ ವಸ್ತುಗಳನ್ನೂ ಎಲ್ಲೆಂದರಲ್ಲಿ ಬಿಸಾಡಲಾಗಿದೆ.

ಮಂಗಳವಾರ ಬೆಳಿಗ್ಗೆ ನಗರದಲ್ಲಿ ಸುತ್ತಾಡಿದ ಎಲ್ಲರಿಗೂ ಕಣ್ಣಿಗೆ ರಾಚಿದ್ದು ಈ ತ್ಯಾಜ್ಯದ ಗುಡ್ಡೆಗಳು. ಇಲ್ಲಿನ ಶರಣಬಸವೇಶ್ವರ ಕೆರೆ ಆವರಣ, ಸೂಪರ್ ಮಾರುಕಟ್ಟೆ ಬಯಲು, ಐತಿಹಾಸಿಕ ಕೋಟೆಯ ಆವರಣ, ವೆಂಕಟೇಶ್ವರ ಕಾಲೊನಿಯ ಹನುಮಾನ್‌ ದೇವಸ್ಥಾನದ ಉದ್ಯಾನ, ಎಸ್‌ವಿಪಿ ವೃತ್ತದ ಬಳಿಯ ಕಸದ ತೊಟ್ಟಿ... ಹೀಗೆ ಎಲ್ಲೆಂದರಲ್ಲಿ ಬಳಸಿದ ವಸ್ತುಗಳನ್ನು ಬಿಸಾಡಲಾಗಿತ್ತು. ಪೂಜಾ ಸಾಮಗ್ರಿಗಳಿಂದಲೇ ತುಂಬಿ ತುಳಿಕಿದ ಕಸದ ತೊಟ್ಟಿಗಳನ್ನು ಪಾಲಿಕೆಯ ಸ್ವಚ್ಛತಾ ಕರ್ಮಿಗಳು ಮಧ್ಯಾಹ್ನದ ನಂತರವೂ ವಿಲೇವಾರಿ ಮಾಡುತ್ತಿದ್ದುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT