ADVERTISEMENT

ಬೆನಕನಳ್ಳಿಯ 20ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2024, 7:47 IST
Last Updated 1 ಸೆಪ್ಟೆಂಬರ್ 2024, 7:47 IST
   

ಚಿಂಚೋಳಿ (ಕಲಬುರಗಿ ಜಿಲ್ಲೆ): ಎಡಬಿಡದೆ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಬೆನಕನಳ್ಳಿ ಗ್ರಾಮದಲ್ಲಿ ಭಾನುವಾರ 20ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ.

ತಾಲ್ಲೂಕಿನ ಕಲ್ಲೂರು ರೋಡ ಗ್ರಾಮದಲ್ಲಿ 10ಕ್ಕೂ ಮನೆಗಳಿಗೆ ನೀರು ನುಗ್ಗಿದೆ. ಮಳೆಯ ಪ್ರವಾಹದ ನೀರಿನಿಂದ ತಡೆಗೋಡೆ ಬಿದ್ದಿದೆ ಎಂದು ತಾ.ಪಂ. ಮಾಜಿ ಸದಸ್ಯ ಜಗನ್ನಾಥ ಈದಲಾಯಿ ತಿಳಿಸಿದ್ದಾರೆ.

ಬೆನಕನಳ್ಳಿ ಗ್ರಾಮದಲ್ಲಿ‌ ನೀರು ಹರಿದು ಹೋಗುವ ಸ್ಥಳಕ್ಕೆ ಅಡ್ಡಲಾಗಿ‌ ಬಸ್ ನಿಲ್ದಾಣ ನಿರ್ಮಿಸುತ್ತಿರುವುದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗದೆ ವಸತಿ ಪ್ರದೇಶದತ್ತ ನುಗ್ಗುತ್ತಿದೆ ಎಂದು ಬಿಜೆಪಿ ಯುವ ಮುಖಂಡ ಮಲ್ಲು ರಾಯಪ್ಪಗೌಡ ತಿಳಿಸಿದ್ದಾರೆ.

ADVERTISEMENT

ನಾಗರಾಳ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ಗಾರಂಪಳ್ಳಿ, ತಾಜಲಾಪುರ ಸೇತುವೆ ಮುಳುಗಿವೆ. ರಾಜ್ಯ ಹೆದ್ದಾರಿ 75ಕ್ಕೆ ಸಂಪರ್ಕ ಬೆಸೆಯುವ ಎರಡು ಗ್ರಾಮಗಳು ಮುಖ್ಯ ರಸ್ತೆಗೆ ಹೋಗುವ ಸಂಚಾರ ಬಂದ್ ಆಗಿದೆ. ಗಾರಂಪಳ್ಳಿಯಲ್ಲಿ ಹೊಸ ಊರು ಹಳೆ ಊರಿನ‌ ಮಧ್ಯೆ ಸಂಪರ್ಕ ಕಡಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.