ADVERTISEMENT

ಅಫಜಲಪುರ: ನಿವೃತ್ತ ಶಿಕ್ಷಕನಿಂದ ₹1.51 ಲಕ್ಷ ದೇಣಿಗೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 7:37 IST
Last Updated 23 ಜನವರಿ 2026, 7:37 IST
<div class="paragraphs"><p>ಹಣ </p></div>

ಹಣ

   

ಸಾಂದರ್ಭಿಕ ಚಿತ್ರ

ಅಫಜಲಪುರ: ‘ಮಣ್ಣೂರು ಗ್ರಾಮದ ಯಲ್ಲಮ್ಮದೇವಿ ದೇವಸ್ಥಾನದ ಅಭಿವೃದ್ಧಿಗೆ ನಿವೃತ್ತ ಶಿಕ್ಷಕ ಭೀಮರಾಯ ಶಿವಪುತ್ರಪ್ಪ ಮಾನಶೆಟ್ಟಿ ಅವರು ₹1.51 ಲಕ್ಷ ದೇಣಿಗೆ ನೀಡಿದ್ದಾರೆ’ ಎಂದು ಯಲ್ಲಮ್ಮದೇವಿ ಟ್ರಸ್ಟ್ ಕಮೀಟಿ ಅಧ್ಯಕ್ಷ ಮಹಾದೇವಪ್ಪ ಕರೂಟಿ ಅವರು ತಿಳಿಸಿದರು.

ADVERTISEMENT

ಚೆಕ್‌ ಸ್ವೀಕರಿಸಿ ಅವರು ಮಾತನಾಡಿ, ‘ದೇವಸ್ಥಾನ, ಮಠಗಳು ಅಭಿವೃದ್ಧಿ ಆಗಬೇಕಾದರೆ ಜನರ ಸಹಕಾರ ಮುಖ್ಯ. ಪ್ರತಿಯೊಬ್ಬರಲ್ಲಿ ಸೇವಾ ಮನೋಭಾವನೆ ಬೆಳೆದು ಬಂದರೆ ಎಲ್ಲಾ ಕಾರ್ಯಕ್ರಮ ಸುಗಮವಾಗಲಿದೆ’ ಎಂದರು.

ಯಲ್ಲಮ್ಮದೇವಿ ಟ್ರಸ್ಟ್ ಕಮೀಟಿ ಅಧ್ಯಕ್ಷ ಮಹಾದೇವಪ್ಪ ಕರೂಟಿ, ಖಜಾಂಚಿ ರಾಚಪ್ಪ ಕೊಪ್ಪಾ, ಕಾರ್ಯದರ್ಶಿ ಗುರುಬಾಳ ಜಕಾಪೂರ, ಸದಸ್ಯ ಜಟ್ಟೆಪ್ಪ ಭುಯ್ಯಾರ, ಬಸವರಾಜ ಮುಜಗೊಂಡ, ಮಹೇಶ ಪ್ಯಾಟಿ, ಚಂದ್ರಕಾಂತ ಹಳಗೋದಿ, ಬಾಳಪ್ಪ ಸಂಬಾಳೆ, ಕಲ್ಲಪ್ಪ ಅವಟೆ, ಕಲ್ಲಪ್ಪ ಸಂಬಾಳೆ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.