ADVERTISEMENT

ಅಂಗನವಾಡಿ ಕೇಂದ್ರದಲ್ಲಿ ಶೌಚಾಲಯ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 9:00 IST
Last Updated 8 ಅಕ್ಟೋಬರ್ 2011, 9:00 IST

ಶನಿವಾರಸಂತೆ: ಹಂಡ್ಲಿ ಗ್ರಾಮ ಪಂಚಾಯಿತಿಯಲ್ಲಿ ಈಚೆಗೆ ನಡೆದ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ವಹಿಸಿದ್ದರು.

ಸಭೆಯಲ್ಲಿ ಗ್ರಾಮಸ್ಥರು ಗ್ರಾಮ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಗುಡು ಗಳಲೆ ಗ್ರಾಮದ ಅಂಗನವಾಡಿ ಕೇಂದ್ರದ ಮಕ್ಕಳು ಶೌಚಾಲಯವಿಲ್ಲದೇ ತೊಂದ ರೆ ಅನುಭವಿಸುತ್ತಿದ್ದಾರೆ. ಪಕ್ಕದಲ್ಲೆ ದೇವಾಲಯ ಹಾಗೂ ಕುಡಿಯುವ ನೀರಿನ ಬಾವಿ ಇದ್ದು, ಅಲ್ಲಿನ ಜನರು ಶೌಚಾಲಯ ನಿರ್ಮಾಣಕ್ಕೆ ಅವಕಾಶ ಕೊಡುತ್ತಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆ ಸಿ.ಟಿ.ಜಯಮ್ಮ ದೂರಿದರು.

ಜಿಲ್ಲಾ ಪಂಚಾಯಿತಿ  ಮಾಜಿ ಅಧ್ಯಕ್ಷೆ ಎಚ್.ಬಿ.ಜಯಮ್ಮ ಮಾತನಾಡಿ, ಬೇರೆ ಗ್ರಾಮದಲ್ಲಿ ಸ್ಥಾಪಿಸಬೇಕಿದ್ದ ಅಂಗನ ವಾಡಿ ಕೇಂದ್ರವನ್ನು ಗುಡುಗಳಲೆಯ ಕಾಂತರಾಜ್ ರಾಜಕೀಯ ಮಾಡಿ ಗುಡುಗಳಲೆಯಲ್ಲೆ ತೆರೆಯುವಂತೆ ಮಾಡಿ, ಇದೀಗ ಸಮಸ್ಯೆ ಹುಟ್ಟು ಹಾಕಿದ್ದಾರೆ ಎಂದು ಧ್ವನಿಗೂಡಿಸಿದರು.

ಪವರ್ ಕಟ್‌ನಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಮೂದರವಳ್ಳಿ ಗ್ರಾಮದಿಂದ ಶನಿವಾರಸಂತೆಗೆ ಹೋಗುವ ಒಳರಸ್ತೆ ಹದಗೆಟ್ಟಿದ್ದು, ದುರಸ್ತಿಗೆ ಜಲ್ಲಿ ಬಂದು ಬಿದ್ದು 6 ತಿಂಗಳಾಗಿದೆ. ತೋಟಗಾರಿಕೆ ಬೆಳೆಗಳಾದ ಕಿತ್ತಳೆ ಮತ್ತಿತರ ಗಿಡ ಪ್ರತಿವರ್ಷ ಪಡೆದ ಫಲಾನುಭವಿಗಳೇ ಪಡೆದು ಕೊಳ್ಳುತ್ತಿದ್ದಾರೆ. ಜನಪ್ರತಿನಿಧಿಗಳು ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಚರ್ಚೆಯಲ್ಲಿ ಪಾಲ್ಗೊಂಡಿದ್ದ ರೈತರಾದ ಮಹೇಶ್, ಮೋಹನ್, ಮಂಜುನಾಥ್, ಸುಬ್ಬಪ್ಪ, ರಾಜಪ್ಪ ಮತ್ತಿತರರು ದೂರಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಿಕಾ ಮಾತನಾಡಿ, ಅಧಿಕಾರ ವ್ಯಾಪ್ತಿಗೆ ಬರುವ 5 ಗ್ರಾಮ ಪಂಚಾಯಿತಿಗಳಿಗೆ ಪ್ರತಿ ತಿಂಗಳ ಮೊದಲ ಹಾಗೂ 3ನೇ ಶನಿವಾರ ತಾವು ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು ಭೇಟಿ ನೀಡಿ, 11 ಗಂಟೆಯಿಂದ 1 ಗಂಟೆಯವರೆಗೆ ರೈತರ ಸಮಸ್ಯೆ ಬಗೆಹರಿಸುವ ಯತ್ನ ಮಾಡುವುದಾಗಿ ತಿಳಿಸಿದರು. ಅಲ್ಲದೇ ಅಂಗನವಾಡಿ ಕೇಂದ್ರದ ಶೌಚಾಲಯ ಸಮಸ್ಯೆಯನ್ನು ಶೀಘ್ರ ಪರಿಹರಿಸಿ ಕೊಡುವ ಭರವಸೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಪ್ರಮೀಳಾ ಮಾತನಾಡಿ, ಹಂಡ್ಲಿ ಗ್ರಾಮ ಪಂಚಾಯಿತಿಯ ವಿವಿಧ ಯೋಜನೆಗಳಿಗೆ 5 ಲಕ್ಷ ರೂಪಾಯಿ ಅನುದಾನ ನೀ ಲಾಗಿದೆ. ಕಾಮಗಾರಿ ನಡೆಯುವಾಗ ಗ್ರಾಮಸ್ಥರು ಗಮನ ಹರಿಸಬೇಕು ಎಂದು ಕರೆ ನೀಡಿದರು. ನೋಡೆಲ್ ಅಧಿಕಾರಿ ಡಾ.ನಾಗರಾಜ್,ಪಂಚಾಯಿತಿ ಉಪಾಧ್ಯಕ್ಷೆ ವನಜಾಕ್ಷಿ, ಸದಸ್ಯರಾದ ವಿನೂತ್‌ಶಂಕರ್, ಎಸ್.ಎಸ್.ಗಣೇಶ್, ಕೆ.ಡಿ.ರಾಜು, ಪರಮೇಶ್, ಮಾದೇವಿ, ದೇವಕಿ, ಸೌಭಾಗ್ಯ, ಚಿನ್ನಮ್ಮ, ಪಾರ್ವತಿ ಹಾಗೂ ಪಿ.ಡಿ.ಓ.ರಾಜಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.