ಶನಿವಾರಸಂತೆ: `ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ರೂಪಿಸಿರುವ ಬಿಸಿಯೂಟ ಸೇರಿದಂತೆ ಹಲವು ಯೋಜನೆಗಳನ್ನು ವಿದ್ಯಾರ್ಥಿ ಗಳು ಸದ್ಬಳಕೆ ಮಾಡಿಕೊಳ್ಳಬೇಕು' ಎಂದು ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಬಿ. ನಾಗಪ್ಪ ಹೇಳಿದರು.
ವಿದ್ಯಾ ಸಂಸ್ಥೆಯ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಅಕ್ಷರ ದಾಸೋಹ ಕೊಠಡಿ ನಿರ್ಮಾ ಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ. ರಾಜಾ ಮಾತನಾಡಿ, ಅಕ್ಷರ ದಾಸೋಹ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ 5.40 ಲಕ್ಷ ರೂಪಾಯಿ ಅನುದಾನ ದೊರೆತಿದೆ. ಈ ಅನುದಾನದಲ್ಲಿ ಗುಣಮಟ್ಟದ ಕಟ್ಟಡ ನಿರ್ಮಿಸಲಾಗು ವುದು ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕ ಎನ್.ಕೆ. ಅಪ್ಪಸ್ವಾಮಿ, ಬಿ.ಕೆ. ಚಿಣ್ಣಪ್ಪ, ಎಂ.ಯು. ಮೊಹಮ್ಮದ್ ಪಾಷಾ, ಪ್ರಾಂಶುಪಾಲ ಎಚ್.ಎ. ದೇವರಾಜ್, ಉಪಪ್ರಾಂಶುಪಾಲ ಕೆ.ಎಂ. ನಾಗರಾಜ್, ದೈಹಿಕ ಶಿಕ್ಷಕ ಪಿ. ಪುಟ್ಟಸ್ವಾಮಿ, ಉಪನ್ಯಾಸಕರು, ಅಧ್ಯಾಪಕರು, ಗುತ್ತಿಗೆದಾರ ಎಸ್.ವಿ. ರಮೇಶ್, ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.