ADVERTISEMENT

 ಅಗಲಿದ ಆಟಗಾರನಿಗೆ ಸಾರ್ವಜಿನಿಕರಿಂದ ಶ್ರದ್ದಾಂಜಲಿ

​ಪ್ರಜಾವಾಣಿ ವಾರ್ತೆ
Published 12 ಮೇ 2018, 10:09 IST
Last Updated 12 ಮೇ 2018, 10:09 IST

ಸುಂಟಿಕೊಪ್ಪ: ಈಚೆಗೆ ಅನಾರೋಗ್ಯದಿಂದ ನಿಧನರಾದ ಇಲ್ಲಿನ ಬ್ಲೂ ಬಾಯ್ಸ್ ಯುವಕ ಸಂಘದ ಖ್ಯಾತ ಪುಟ್ಬಾಲ್ ಆಟಗಾರ ಎಸ್.ಯು. ಸಮೀರ್ ಆಹ್ಮದ್ ಉಸ್ಮಾನಿ ಅವರ ನಿಧನಕ್ಕೆ ಸಂಘದ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಕನ್ನಡ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ಈ ಸಂದರ್ಭ ಬಿಬಿಸಿ ಸದಸ್ಯ, ಫುಟ್ಬಾಲ್ ಆಟಗಾರ ಶರೀಫ್ ಮಾತನಾಡಿ, ಸಮೀರ್ ಅವರು ರಾಜ್ಯ ಮಟ್ಟದಲ್ಲಿ ಆಟವಾಡಿ ಹೆಸರು ಗಳಿಸಿ ಫುಟ್ಬಾಲ್ ಆಟಕ್ಕೆ ಜೀವ ತುಂಬಿದ್ದರು. ಹಿಂದಿನಿಂದಲೂ ಇಲ್ಲಿನ ಫುಟ್ಬಾಲ್ ಆಟವನ್ನು ಜೀವಂತವಾಗಿರಿಸಿದ ಅವರು ಹಲವಾರು ಯುವ ಕ್ರೀಡಾ ಪ್ರತಿಭೆಗಳನ್ನು ರಾಷ್ಟ್ರಮಟ್ಟದವರೆಗೂ ಪರಿಚಯಿಸಿದ ಒಬ್ಬ ಖ್ಯಾತ ಆಟಗಾರ. ಇದರಿಂದ ಬ್ಲೂ ಬಾಯ್ಸ್ ಸಂಘಕ್ಕೆ ಮತ್ತು ಕ್ರೀಡಾಭಿಮಾನಿಗಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.

ಕಳೆದ ಕೆಲವು ತಿಂಗಳಿನಿಂದೀಚೆಗೆ ವಿದೇಶದಿಂದ ಬಂದ ಅವರು ಫುಟ್ಬಾಲ್ ತವರೂರು ಸುಂಟಿಕೊಪ್ಪದಲ್ಲಿ ನಶಿಸಿ ಹೋಗುತ್ತಲಿದ್ದ ಫುಟ್ಬಾಲ್ ಆಟಕ್ಕೆ ಜೀವ ತುಂಬುವ ನಿಟ್ಟಿನಲ್ಲಿ ‘ಸೇವ್ ಫುಟ್ಬಾಲ್’ ಎಂಬ ವಿನೂತನ ಕಾರ್ಯಕ್ರಮಕ್ಕೆ ಅಡಿಪಾಯ ಹಾಕುವ ಮುನ್ನವೇ ಇಹಲೋಕ ತ್ಯಜಿಸಿದ್ದು ಕ್ರೀಡಾ ಪ್ರೇಮಿಗಳಿಗೆ ಬೇಸರ ತಂದಿದೆ ಎಂದು ಸಂಘದ ಮಾಜಿ ಅಧ್ಯಕ್ಷ ಆಲಿಕುಟ್ಟಿ ಹೇಳಿದರು.

ADVERTISEMENT

ಮೃತರ ಆತ್ಮಕ್ಕೆ ಶಾಂತಿ ಕೋರಿ 2 ನಿಮಿಷ ಸಂತಾಪವನ್ನು ಇದೇ ಸಂದರ್ಭದಲ್ಲಿ ಸೂಚಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.