ADVERTISEMENT

ಅನುಪಮಾಗೆ `ಫುಲ್‌ಬ್ರೈಟ್' ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 13:18 IST
Last Updated 19 ಜೂನ್ 2013, 13:18 IST

ಮೈಸೂರು: ಅಮೆರಿಕ ಸರ್ಕಾರದ ಶಿಕ್ಷಣ ಸಚಿವಾಲಯ ಹಾಗೂ ಜೆ. ವಿಲಿಯಂ ಫುಲ್‌ಬ್ರೈಟ್ ಫಾರಿನ್ ಸ್ಕಾಲರ್‌ಶಿಫ್ ಬೋರ್ಡ್       ನೀಡುವ `ಫುಲ್‌ಬ್ರೈಟ್ ಕ್ಲಾಸ್‌ರೂಮ್ ಟೀಚರ್' ಪ್ರಶಸ್ತಿಗೆ ಅನುಪಮಾ ರಾಮಚಂದ್ರ  ಅವರು ಭಾಜನರಾಗಿದ್ದಾರೆ.

2013-14ನೇ ಶೈಕ್ಷಣಿಕ ವರ್ಷದಲ್ಲಿ ನಡೆಯುವ ಶಿಕ್ಷಕರ ವಿನಿಮಯ ಕಾರ್ಯಕ್ರಮದ ಅಂಗವಾಗಿ ಅವರು ವಿವಿಧ     ದೇಶಗಳಿಗೆ ಪ್ರಯಾಣಿಸಲಿದ್ದಾರೆ.

ಫುಲ್‌ಬ್ರೈಟ್ ಸಂಸ್ಥೆ ವಿಶ್ವದ     155 ರಾಷ್ಟ್ರಗಳಲ್ಲಿ ಶಿಕ್ಷಣ    ಗುಣಮಟ್ಟ ಸುಧಾರಣೆಗೆ ಶ್ರಮಿಸುತ್ತಿರುವ ಪ್ರತಿಷ್ಠಿತ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.