ADVERTISEMENT

ಕಬಡ್ಡಿ: ಸರ್ಕಾರಿ ಕಾಲೇಜು ವಿಭಾಗೀಯ ಮಟ್ಟಕ್ಕೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 8:21 IST
Last Updated 19 ಸೆಪ್ಟೆಂಬರ್ 2013, 8:21 IST

ಸೋಮವಾರಪೇಟೆ: ಸಮೀಪದ ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಕಬಡ್ಡಿ ತಂಡ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದೆ.

ಈಚೆಗೆ ಕೂಡಿಗೆಯಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಿಜೇತರಾಗಿ, ಮಂಡ್ಯದಲ್ಲಿ ನಡೆಯುವ ವಿಭಾಗೀಯ ಮಟ್ಟಕ್ಕೆ ಆರ್ಹತೆ ಪಡೆದಿದ್ದಾರೆ. ಎಚ್.ಕೆ. ರಶ್ಮಿ, ಬಿ.ಎನ್. ಡೀಲಾಕ್ಷಿ, ಕೆ.ಎ. ವೇದಾವತಿ, ಎಚ್.ಎಸ್. ಶಿಲ್ಪಾ, ವಿದ್ಯಾ, ಪ್ರೇಮ, ಮೇಘ, ಎಸ್.ಡಿ. ಪ್ರಿಯಾಂಕ, ಎಂ.ಎಸ್. ಇಂದುಶ್ರೀ, ಡಿ.ಎಲ್. ನವ್ಯ ಕಬಡ್ಡಿ ತಂಡದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.