ADVERTISEMENT

ಕಾಡಾನೆ ಹಾವಳಿ: ಕಾಫಿ, ಬಾಳೆ ಫಸಲು ಹಾನಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 6:50 IST
Last Updated 4 ಜೂನ್ 2011, 6:50 IST

ಸೋಮವಾರಪೇಟೆ: ಇಲ್ಲಿಗೆ ಸಮೀಪದ ನೇಗಳ್ಳೆ- ಕರ್ಕಳ್ಳಿ ಗ್ರಾಮದ ಕೃಷಿಕ ದಿವಾಕರ್ ಎಂಬುವರಿಗೆ ಸೇರಿದ ಕಾಫಿ  ತೋಟಕ್ಕೆ ಗುರುವಾರ ರಾತ್ರಿ ನುಗ್ಗಿದ ಕಾಡಾನೆಗಳ ಹಿಂಡು ಕಾಫಿ ಗಿಡ ಹಾಗು ಬಾಳೆ ಫಸಲನ್ನು ನಾಶಗೊಳಿಸಿವೆ.

ಕಳೆದ 3ದಿನಗಳ ಹಿಂದೆ ಕಾಡಾ ೆಯೊಂದು ಇದೇ ಪ್ರದೇಶಕ್ಕೆ ಬಂದು ಕಾಫಿ ಗಿಡ ಸೇರಿದಂತೆ ತೋಟದಲ್ಲಿದ್ದ ಸಣ್ಣ ಗಾತ್ರದ ಮರಗಳನ್ನು ಉರುಳಿಸಿದ್ದ ಬೆನ್ನಲ್ಲೇ ಗುರುವಾರ ರಾತ್ರಿ 7-8 ಕಾಡಾನೆಗಳ ಹಿಂಡು ಮತ್ತೆ ಲಗ್ಗೆಯಿ ಟ್ಟಿದ್ದು, ಸಾವಿರಾರು ರೂಪಾಯಿ ನಷ್ಟ ವಾಗಿದೆ ಎಂದು ಎಂದು ದಿವಾಕರ್ ಹೇಳುತ್ತಾರೆ.

ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ರಾತ್ರಿ ವೇಳೆ ಗ್ರಾಮಸ್ಥರು ಮನೆಯಿಂದ ಹೊರ ಬರಲು ಭಯ ಪಡುವಂತಾಗಿದೆ. ಮನೆಯ ಸುತ್ತಮುತ್ತ ಹಲಸಿನ ಮರದಲ್ಲಿರುವ ಹಣ್ಣು ಹಾಗು ಬಾಳೆಯನ್ನು ಅರಸಿ ಕಾಡಾನೆಗಳು ಬರುತ್ತಿದ್ದು, ಫಸಲನ್ನು ಹಾನಿಗೊಳಿಸುತ್ತಿವೆ.

ಈ ಪ್ರದೇಶಕ್ಕೆ ಒತ್ತಿಕೊಂಡಂತೆ ಇರುವ ಹುದುಗೂರು ಅರಣ್ಯ ವ್ಯಾಪ್ತಿಯಿಂದ ಕಾಡಾನೆಗಳು ಆಗಮಿಸುತ್ತಿದ್ದು, ನಿರ್ವಹಣೆಯಿಲ್ಲದ ಆನೆ ಕಂದಕ ಹಾಗು ಸೋಲಾರ್ ಬೇಲಿಗಳಿಂದ ಪ್ರತಿನಿತ್ಯ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ ಎಂದು ದಿವಾಕರ್ ದೂರಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.