ADVERTISEMENT

ಕಾಡು ಪ್ರಾಣಿಯ ಅವಶೇಷ ಪತ್ತೆ: ನ್ಯಾಯಾಂಗ ಬಂಧನ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 10:20 IST
Last Updated 1 ಜೂನ್ 2011, 10:20 IST

ವಿರಾಜಪೇಟೆ: ಮಲ್ಲಂಬಟ್ಟಿ ಗ್ರಾಮದ ನಿಮ್ರಾನ್ ರೆಸಾರ್ಟ್‌ನಲ್ಲಿ ಕಾಡು ಪ್ರಾಣಿ ಗಳ ಅವಶೇಷ ಪತ್ತೆಯಾದ್ದರಿಂದ ರೆಸಾ ರ್ಟ್‌ನ ವ್ಯವಸ್ಥಾಪಕ ರಾಜೇಶ್ ಎಂಬಾತ ನನ್ನು ಪೊಲೀಸರು ಬಂಧಿಸಿ ನ್ಯಾಯಾಲ ಯದ ಮುಂದೆ ಹಾಜರುಪಡಿಸಿದರು. ಆತನನ್ನು 15 ದಿನಗಳವರೆಗೆ ನ್ಯಾಯಾ ಂಗ ಬಂಧನದಲ್ಲಿಡುವಂತೆ ನ್ಯಾಯಾ ಧೀಶರು ಆದೇಶಿಸಿದ್ದಾರೆ.

ಮಲ್ಲಂಬಟ್ಟಿ ಗ್ರಾಮದ ಕಾಫಿ ತೋಟದ ಹಿಂಭಾಗದಲ್ಲಿರುವ ದೆಹಲಿ ಮೂಲದ ವ್ಯಕ್ತಿಯ ರೆಸಾರ್ಟ್ ಅನ್ನು ಸೋಮವಾರ ರಾತ್ರಿ ಮಡಿಕೇರಿಯ ಅರಣ್ಯ ಸಂಚಾರಿ ಪೊಲೀಸ್ ದಳ ಶೋಧಿಸಿತು. ಆಗ ಕಾಡುಕೋಣ, ಜಿಂಕೆ ಕೊಂಬು, ಹುಲಿ, ಚಿರತೆಗಳ ತಲೆ ಬುರುಡೆ, ಚರ್ಮಗಳು ಸೇರಿದಂತೆ 19 ಅವಶೇಷಗಳನ್ನು ಪೊಲೀಸರು ವಶಪಡಿಸಿ ಕೊಂಡಿದಾರೆ. ನಂತರ ಪ್ರಕರಣವನ್ನು ಗ್ರಾಮಾಂತರ ಪೊಲೀಸರಿಗೆ ಹಸ್ತಾಂತರಿ ಸಿದ್ದಾರೆ.

ಪೊಲೀಸರು ರೆಸಾರ್ಟ್‌ನ ಮಾಲೀಕ ದೆಹಲಿಯ ವಾಡಿಯಾರ್, ಪಾಲುದಾರ ಮುಂಬಯಿಯ ಅಮರನಾಥ್ ಸೇರಿ ದಂತೆ ಮೂರು ಮಂದಿಯ ವಿರುದ್ಧ ಪ್ರಕ ರಣ ದಾಖಲಿಸಿದ್ದಾರೆ. ಅರಣ್ಯ ಕಾಯ್ದೆ ಪ್ರಕಾರ ಕಾಡು ಪ್ರಾಣಿಗಳ ಅವಶೇಷ ಗಳನ್ನು ರೆಸಾರ್ಟ್‌ನಲ್ಲಿಡುವುದು ಅಪ ರಾಧ. ಮುಂದಿನ ತನಿಖೆ ಯನ್ನು ಗ್ರಾಮಾಂತರ ಪೊಲೀಸರು ನಡೆಸಲಿ ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸುವುದಾಗಿಪೊಲೀಸರು ತಿಳಿಸಿದ್ದಾರೆ. ಮಡಿಕೇರಿಯ ಅರಣ್ಯ ಸಂಚಾರಿ ದಳದ ಪೊಲೀಸರಿಗೆ ದೊರೆತ ಸುಳಿವಿನ ಮೇರೆಗೆ ರೆಸಾರ್ಟ್ ಮೇಲೆ ದಾಳಿ ಮಾಡ ಲಾ ಯಿತು ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.