ADVERTISEMENT

ಕೊಡಗಿನಲ್ಲಿ ಮಳೆ ಕ್ಷೀಣ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 10:20 IST
Last Updated 14 ಆಗಸ್ಟ್ 2012, 10:20 IST

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರ ಸಂಪೂರ್ಣವಾಗಿ ಮಳೇ ಕ್ಷೀಣಗೊಂಡಿದೆ. ನಗರದಲ್ಲಿ ದಿನವಿಡಿ ಬಿಸಿಲಿನ ವಾತಾವರಣವಿತ್ತು. ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ತುಂತುರು ಮಳೆಯಾಗಿರುವ ವರಿದಿಯಾಗಿದೆ.

ಕೊಡಗು ಜಿಲ್ಲೆಯಲ್ಲಿ ಸರಾಸರಿ 1.7ಸೆ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ136.6 ಸೆ.ಮೀ. ಮಳೆ ದಾಖಲಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ 1.9 ಸೆ.ಮೀ., ವಿರಾಜಪೇಟೆ ತಾಲ್ಲೂಕಿನಲ್ಲಿ 1.8 ಸೆ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ 1.4 ಸೆ.ಮೀ. ಸರಾಸರಿ ಮಳೆ ದಾಖಲಾಗಿದೆ. 

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ: ಮಡಿಕೇರಿ ಕಸಬಾ 1.4 ಸೆ.ಮೀ., ನಾಪೋಕ್ಲು 1.4 ಸೆ.ಮೀ., ಸಂಪಾಜೆ 2.3 ಸೆ.ಮೀ., ಭಾಗಮಂಡಲ 2.5 ಸೆ.ಮೀ., ವಿರಾಜಪೇಟೆ ಕಸಬಾ 1.6 ಸೆ.ಮೀ., ಹುದಿಕೇರಿ 1.5 ಸೆ.ಮೀ., ಶ್ರಿಮಂಗಲ 1.2 ಸೆ.ಮೀ.,  ಪೊನ್ನಂಪೇಟೆ 1.8 ಸೆ.ಮೀ., ಅಮ್ಮತಿ 3.8 ಸೆ.ಮೀ., ಬಾಳೆಲೆ 7.50 ಮಿ.ಮೀ., ಸೋಮವಾರಪೇಟೆ ಕಸಬಾ 1.2 ಸೆ.ಮೀ., ಶನಿವಾರಸಂತೆ 1 ಸೆ.ಮೀ., ಶಾತಂಳ್ಳಿ 4.5 ಸೆ.ಮೀ., ಕೊಡ್ಲಿಪೇಟೆ 1 ಸೆ.ಮೀ. ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2856.62ಅಡಿಗಳು. ಇಂದಿನ ನೀರಿನ ಒಳ ಹರಿವು 4841 ಕ್ಯೂಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 4786 ಕ್ಯೂಸೆಕ್, ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 1562, ನಾಲೆಗೆ 1500ಕ್ಯೂಸೆಕ್ ಆಗಿತ್ತು. ಇಂದಿನ ನೀರಿನ ಹೊರ ಹರಿವು ನದಿಗೆ 3800 ಕ್ಯೂಸೆಕ್, ನಾಲೆಗೆ 1300 ಕ್ಯೂಸೆಕ್ ಆಗಿದೆ.

ದಕ್ಷಿಣ ಕೊಡಗಿನಲ್ಲೂ ಇಳಿಮುಖ
ಗೋಣಿಕೊಪ್ಪಲು: ದಕ್ಷಿಣ ಕೊಡಗಿನಾದ್ಯಂತ ಎರಡು ದಿನಗಳಿಂದ ನಿರಂತರವಾಗಿ ಬಿದ್ದ ಮಳೆ ಸೋಮವಾರ ಬಿಡುವು ಕೊಟ್ಟಿತ್ತು. ಬೆಳಿಗ್ಗೆ ರಭಸವಾಗಿ ಮಳೆ ಬಿದ್ದು ಬಳಿಕ ಬಿಸಿಲು ಕಾಣಿಸಿಕೊಂಡಿತು. ಆಗಾಗ್ಗೆ ಬೀಳುವ ತುಂತುರು ಮಳೆ ಆಗಾಗ ಬರುತ್ತಿದೆ. ಶ್ರೀಮಂಗಲ, ಕುಟ್ಟ ಮೊದಲಾದ ಭಾಗಗಳಲ್ಲಿಯೂ ಬಿಸಿಲು ಕಾಣಿಸಿಕೊಂಡಿದ್ದು ನದಿ ತೊರೆಗಳ ಪ್ರವಾಹ  ಇಳಿಯತೊಡಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.