ADVERTISEMENT

ಕೊಡವ ಲ್ಯಾಂಡ್‌ ರಚನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 8:19 IST
Last Updated 18 ಸೆಪ್ಟೆಂಬರ್ 2013, 8:19 IST

ಮಡಿಕೇರಿ: ಕೊಡವ ಲ್ಯಾಂಡ್ ರಚನೆಗೆ ಸಂಬಂಧ ಸಂವಿಧಾನ 6ನೇ ಶೆಡ್ಯೂಲ್‌ಗೆ ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿ ಮಂಗಳವಾರ ಬಿರುನಾಣಿಯಲ್ಲಿ ಸಿ.ಎನ್.ಸಿ ಆಶ್ರಯದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲಾಯಿತು. 

ಕೇಂದ್ರದ ಯು.ಪಿ.ಎ ಸರ್ಕಾರವು ತೆಲಂಗಾಣ ರಾಜ್ಯ ರಚನೆಯ ಸಂಬಂಧ ಸಂವಿಧಾನ ತಿದ್ದುಪಡಿಗಾಗಿ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ತೆಲಂಗಾಣಕ್ಕಿಂತಲೂ ಚಾರಿತ್ರಿಕವಾಗಿ, ಭಾಷೆ, ಜನಪದ, ಸಂಸ್ಕೃತಿ, ಜನಾಂಗೀಯ ವಿಶೇಷತೆ ಮತ್ತು ಅರ್ಹತೆ ಹೊಂದಿರುವ ಕೊಡವ ಲ್ಯಾಂಡ್ ರಚನೆಗೆ ಮುಂದಾಗುವಂತೆ ಸಿ.ಎನ್.ಸಿ ಅಧ್ಯಕ್ಷ ಎನ್.ಯು ನಾಚಪ್ಪ ಆಗ್ರಹಿಸಿದರು.

ನವೆಂಬರ್ 1 ರಂದು ನವದೆಹಲಿ ಚಲೋ ರ್‌್ಯಾಲಿ ಹಮ್ಮಿಕೊಳ್ಳಲಾಗಿದೆ. ನವೆಂಬರ್ 24 ರಂದು ಮಡಿಕೇರಿಯಲ್ಲಿ ಕೊಡವ ನ್ಯಾಷನಲ್ ಡೇ  ರ್‌್ಯಾಲಿ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭ ನೆಲ್ಲಿರ ತಮ್ಮು ರಾಜೇಂದ್ರ, ಕಾಳಿಮಾಡ ಚೋಮುಣಿ, ಬೊಜ್ಜಂಗಡ ಚಂಪ, ಬೊಜ್ಜಂಗಡ ದೇವಮ್ಮ, ಅಣ್ಣಳಮಾಡ ಶಶಿ, ಬೊಟ್ಟಂಗಡ ಮೀನಾಕ್ಷಿ, ಬುಟ್ಟಿಯಂಡ ತಂಬಿ, ಬಾಚರಣಿಯಂಡ ಚಿಪ್ಪಣ್ಣ, ಬಾದುಮಂಡ ದಿನು, ಅಪ್ಪೇಂಗಡ ಮಾಲೆ, ಕುಪ್ಪುಡಿರ ಪೊನ್ನು, ಅಜ್ಜಿಕುಟ್ಟಿರ ಲೋಕೇಶ್, ಅಜ್ಜಮಾಡ ಚಿಮ್ಮ, ಅಜ್ಜಮಾಡ ಸೋಮಯ್ಯ, ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.