ADVERTISEMENT

ಖೋಟಾನೋಟು ಚಲಾವಣೆ: 7 ವರ್ಷ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 6:43 IST
Last Updated 6 ಏಪ್ರಿಲ್ 2013, 6:43 IST

ಮಡಿಕೇರಿ: ಖೋಟಾನೋಟು ಚಲಾವಣೆಗೆ ಯತ್ನಿಸಿದವರಿಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಸ್.ಆರ್. ಸೋಮಶೇಖರ್ ಅವರು ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದ್ದಾರೆ.

ಕುಶಾಲನಗರದ ಬಸವೇಶ್ವರ ಬಡಾವಣೆಯ ನಿವಾಸಿ ಬಿ.ಎಂ. ಮೊಹಮ್ಮದ್ ಹನೀಫ್ ಯಾನೆ ಹನೀಫ್ ಹಾಗೂ ಇಂದಿರಾ ಬಡಾವಣೆಯ ಡಿ.ಎ. ಅಬ್ದುಲ್ ಲತೀಫ್ ಎಂಬುವವರು ಕುಶಾಲನಗರದ ಕ್ಯಾಂಟೀನ್‌ನೊಂದರ ಬಳಿ 2006ರ ಸೆಪ್ಟೆಂಬರ್ 2ರಂದು ಖೋಟಾ ನೋಟುಗಳ ಚಲಾವಣೆ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಡಿಸಿಐಬಿ ಪೊಲೀಸರು,  ಹನೀಫ್ ಅವರು ನೀಡಿದ ರೂ.1000 ಮುಖಬೆಲೆಯ 10  ಹಾಗೂ 500 ಮುಖಬೆಲೆಯ 10 ಖೋಟಾ ನೋಟುಗಳನ್ನು ಚಲಾವಣೆ ಮಾಡಲು ಯತ್ನಿಸುತಿದ್ದ ಅಬ್ದುಲ್ ಲತೀಫ್ ಅವರನ್ನು ಬಂಧಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಇಬ್ಬರು ತಪ್ಪಿತಸ್ಥರಿಗೆ ತಲಾ 7 ವರ್ಷ ಸಜೆ ಹಾಗೂ ತಲಾ ರೂ.25000 ದಂಡ ವಿಧಿಸಿದ್ದಾರೆ.
ಹನೀಫ್ ಖೋಟಾನೋಟುಗಳನ್ನು ಪುನಃ ಇಟ್ಟುಕೊಂಡಿದ್ದ ಅಪರಾಧಕ್ಕೆ ಪುನಃ 3 ವರ್ಷ ಕಠಿಣ ಸಜೆ ಮತ್ತು ರೂ.10 ಸಾವಿರ ದಂಡ ವಿಧಿಸಿದ್ದಾರೆ.

ಹನೀಫ್ ಒಟ್ಟು ರೂ.60 ಸಾವಿರವನ್ನು ಹಾಗೂ ಅಬ್ದುಲ್ ಲತೀಫ್ ಒಟ್ಟು ರೂ.50 ಸಾವಿರವನ್ನು ದಂಡವಾಗಿ ನೀಡುವಂತೆ ಅವರು ತೀರ್ಪು ನೀಡಿದ್ದಾರೆ.
ಸರ್ಕಾರದ ಒರ ಎ.ಎ. ಪಾರಶೆಟ್ಟಿ ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.