ಸಿದ್ದಾಪುರ: ಮೈಸೂರು- ಕೇರಳ ರಾಜ್ಯ ಹೆದ್ದಾರಿಯಲ್ಲಿ ಮಾಲ್ದಾರೆ ಗ್ರಾಮದ ಬಳಿ ಮಂಗಳವಾರ ಚಲಿಸುತ್ತಿದ್ದ ಕಾರಿನ ಕಾಡಾನೆ ದಾಳಿ ಮಾಡಿದ್ದು, ಕಾರು ಜಖಂಗೊಂಡಿದೆ. ಅದೃಷ್ಟವಶಾತ್ ಕಾರಿನಲ್ಲಿ ಇದ್ದ ಇಬ್ಬರೂ ಆನೆ ದಾಳಿಯಿಂದ ಪಾರಾಗಿದ್ದಾರೆ.
ಸಿದ್ದಾಪುರ ನಿವಾಸಿಗಳಾದ ಶೌಕತ್ ಆಲಿ ಹಾಜಿ ಮತ್ತು ಅವರ ಮಗ ಮಂಗಳವಾರ ಮುಂಜಾನೆ ಮೈಸೂರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ರಸ್ತೆ ಮಧ್ಯೆ ಎದುರುಗೊಂಡ ಒಂಟಿ ಸಲಗ ಇವರು ಚಲಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ವಾಹನದ ಮುಂಭಾಗವನ್ನು ಗುದ್ದಿ ಜಖಂಗೊಳಿಸಿದೆ.
ಆಕ್ರೋಶ ಗೊಂಡಿದ್ದ ಸಲಗ ಕಾರನ್ನು ಕೆಲ ಮೀಟರ್ ಹಿಂದಕ್ಕೆ ತಳ್ಳಿದೆ. ದಿಢೀರ್ ಸಲಗದ ದಾಳಿಗೆ ಕಂಗೆಟ್ಟ ಇಬ್ಬರೂ ಕೆಲ ಕಾಲ ವಿಚಲಿತಗೊಂಡರು. ನಂತರ ಸಲಗವು ಕಾರನ್ನು ರಸ್ತೆ ಪಕ್ಕಕ್ಕೆ ತಳ್ಳಿ ಪಕ್ಕದ ರಕ್ಷಿತಾರಣ್ಯದೊಳಗೆ ಮರೆಯಾಯಿತು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಡಗು ಜಿಲ್ಲೆ ಅರಣ್ಯ ಪ್ರದೇಶದ ದಾರಿಗಳಲ್ಲಿ ಕಾಡಾನೆಗಳು ಈಚೆಗೆ ಪದೇಪದೇ ವಾಹನಗಳ ಮೇಲೆ ದಾಳಿ ಮಾಡತ್ತಿದ್ದು, ಇದು ಎರಡನೇ ಘಟನೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.