ADVERTISEMENT

ಜಲಪಾತದಲ್ಲಿ ಮುಳುಗಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 20:03 IST
Last Updated 1 ಅಕ್ಟೋಬರ್ 2017, 20:03 IST

ನಾಪೋಕ್ಲು (ಕೊಡಗು ಜಿಲ್ಲೆ) : ಸ್ನೇಹಿತರೊಂದಿಗೆ ಚೇಲಾವರ ಜಲಪಾತ ವೀಕ್ಷಣೆಗೆ ತೆರಳಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ದರ್ಶನ್ (22) ಭಾನುವಾರ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಬೆಂಗಳೂರಿನ ಜೆ.ಪಿ ನಗರದ ನಿವಾಸಿ ಕಾವೇರಪ್ಪ ಅವರ ಪುತ್ರರಾದ ದರ್ಶನ್, ಜಲಪಾತದಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ಕೆಎಸ್ಐಪಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಅವರು, ಶನಿವಾರ ರಾತ್ರಿ ಮಡಿಕೇರಿ ದಸರಾ ವೀಕ್ಷಿಸಿದ ಬಳಿಕ ಜಲಪಾತ ವೀಕ್ಷಣೆಗೆಂದು ಸ್ನೇಹಿತರೊಂದಿಗೆ ಚೇಲಾವರಕ್ಕೆ ತೆರಳಿದ್ದರು. ನೀರಿನ ಹರಿವು ಹೆಚ್ಚಿದ್ದು ಯುವಕನ ದೇಹ ಹೊರತೆಗೆಯಲು ಸಾಧ್ಯವಾಗಿಲ್ಲ ಎಂದು ಮುಳುಗುತಜ್ಞ ಬಾಚಮಂಡ ತಿಲಕ್ ತಿಳಿಸಿದ್ದಾರೆ.

ADVERTISEMENT

ನಾಪೋಕ್ಲು ಎಸ್‌.ಐ ನಂಜುಂಡಸ್ವಾಮಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.