ADVERTISEMENT

ತುಂತುರು ಮಳೆ, ಮುಂಗಾರು ದುರ್ಬಲ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 8:30 IST
Last Updated 17 ಜುಲೈ 2012, 8:30 IST

ಮಡಿಕೇರಿ: ಜಿಲ್ಲೆಯಲ್ಲಿ ಸೋಮವಾರ ಮುಂಗಾರು ದುರ್ಬಲವಾಗಿದ್ದು, ನಗರದಲ್ಲಿ ಆಗಾಗ ತುಂತುರು ಮಳೆಯಾಗಿದ್ದು, ಉಳಿದಂತೆ ಮೋಡ ಕವಿದ ವಾತಾವರಣವಿತ್ತು.

ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 3.36ಮಿ.ಮೀ. ಮಳೆ ದಾಖಲಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ 6.25ಮಿ.ಮೀ., ವಿರಾಜಪೇಟೆ ತಾಲ್ಲೂಕಿನಲ್ಲಿ 2.17ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ 1.67ಮಿ.ಮೀ. ಸರಾಸರಿ ಮಳೆ ಮಳೆಯಾಗಿದೆ. ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ: ಮಡಿಕೇರಿ ಕಸಬಾ 8.40 ಮಿ.ಮೀ., ಸಂಪಾಜೆ 15 ಮಿ.ಮೀ., ಬಾಳೆಲೆ 11.50 ಮಿ.ಮೀ., ಶಾಂತಳ್ಳಿ 6 ಮಿ.ಮೀ. ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಸೋಮವಾರ ನೀರಿನ ಮಟ್ಟ 2826.62 ಅಡಿಗಳು. ನೀರಿನ ಒಳ ಹರಿವು 538ಕ್ಯೂಸೆಕ್ , ಕಳೆದ ವರ್ಷ ನೀರಿನ ಒಳಹರಿವು 6062 ಕ್ಯೂಸೆಕ್ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.