ADVERTISEMENT

ಪೆಮ್ಮಂಡ ತಂಡದ ಸೋಮಯ್ಯ ಹ್ಯಾಟ್ರಿಕ್ ಗೋಲು

ಕುಲ್ಲೇಟಿರ ಕಪ್ ಹಾಕಿಟೂರ್ನಿ: ಆತಿಥೇಯ ತಂಡ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 6 ಮೇ 2018, 11:40 IST
Last Updated 6 ಮೇ 2018, 11:40 IST

ನಾಪೋಕ್ಲು: ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ಉತ್ಸವದ ಶನಿವಾರದ ಪಂದ್ಯಗಳಲ್ಲಿ ಆತಿಥೇಯ ಕುಲ್ಲೇಟಿರ ತಂಡವು ಅಮ್ಮಾಟಂಡ ತಂಡದ ವಿರುದ್ಧ 2-0 ಅಂತರದ ಗೆಲುವು ಸಾಧಿಸಿ ಮುಂದಿನ ಹಂತ ಪ್ರವೇಶಿಸಿತು. ಪೆಮ್ಮಂಡ ತಂಡದ ಸೋಮಯ್ಯ ಪಿ.ಎ. ಹ್ಯಾಟ್ರಿಕ್ ಗೋಲು ಗಳಿಸಿ ಮಿಂಚಿದರು.

ಕುಲ್ಲೇಟಿರ ತಂಡದ ನಾಚಪ್ಪ ಮತ್ತು ಯತೀನ್ ತಲಾ ಒಂದು ಗೋಲು ಹೊಡೆದು ತಂಡದ ಗೆಲುವಿಗೆ ಕಾರಣರಾದರು. ಉಳಿದಂತೆ ಕೊಂಡೀರ, ಕಂಬೀರಂಡ, ಅರಮಣಮಾಡ, ನೆಲ್ಲಮಕ್ಕಡ, ಅಂಜಪರವಂಡ, ಇಟ್ಟೀರ, ಮೇಕೇರಿರ, ಬಡುವಂಡ ಹಾಗೂ ಪೆಮ್ಮಂಡ ತಂಡಗಳು ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದವು.

ಮೈದಾನ ಮೂರರಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಪೆಮ್ಮಂಡ ತಂಡವು ಮಲಚೀರ ತಂಡದ ವಿರುದ್ಧ 6-0 ಅಂತರದ ಭರ್ಜರಿ ಗೆಲುವು ಪಡೆಯಿತು. ಪೆಮ್ಮಂಡ ತಂಡದ ಸೋಮಯ್ಯ ಪಿ.ಎ. ಹ್ಯಾಟ್ರಿಕ್ ಗೋಲು ಗಳಿಸಿದರು. ಕರುಂಬಯ್ಯ ಒಂದು ಹಾಗೂ ಸೋಮಣ್ಣ ಪಿ.ವಿ. ಎರಡು ಗೋಲು ಹೊಡೆದರು.

ADVERTISEMENT

ಮೈದಾನ ಒಂದರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೊಂಡೀರ ತಂಡವು ಶಿವಚಾಳಿಯಂಡ ತಂಡದ ವಿರುದ್ಧ 3-1 ಅಂತರದ ಗೆಲುವು ಪಡೆಯಿತು.

ಕೊಂಡೀರ ತಂಡದ ತಮ್ಮಯ್ಯ ಒಂದು, ಹಾಗೂ ಹೇಮಂತ್ ಮಾದಪ್ಪ ಎರಡು ಗೋಲು ಹೊಡೆದರು. ಶಿವಚಾಳಿಯಂಡ ತಂಡದ ವಿಜು ಪೂಣಚ್ಚ ಒಂದು ಗೋಲು ದಾಖಲಿಸಿದರು. ಎರಡನೇ ಪಂದ್ಯದಲ್ಲಿ ಕಂಬೀರಂಡ ತಂಡವು ಬೊಳಿಯಾಡಿರ ತಂಡದ ವಿರುದ್ಧ 5-0 ಅಂತರದ ಭರ್ಜರಿ ಗೆಲುವು ದಾಖಲಿಸಿತು.

ಕಂಬೀರಂಡ ತಂಡದ ಯೋಗೇಶ್ ಅಪ್ಪಯ್ಯ 2 ಮಹೀ ಮೊಣ್ಣಪ್ಪ ಒಂದು ರಮೇಶ್ ಒಂದು ರಾಯ್ ಜಗದೀಶ್ ಒಂದು ಗೋಲು ಗಳಿಸಿದರು. ಮೂರನೇ ಪಂದ್ಯದಲ್ಲಿ ಅರಮಣಮಾಡ ತಂಡವು ಪಳೆಂಗಡ ತಂಡದ ವಿರುದ್ಧ 3-0 ಅಂತರದ ಗೆಲುವು ಸಾಧಿಸಿತು. ಆಟಗಾರರಾದ ಚರ್ಮಣ್ಣ ಒಂದು ಹಾಗೂ ನಿರನ್ ಎರಡು ಗೋಲು ಗಳಿಸಿದರು.

ನಾಲ್ಕನೇ ಪಂದ್ಯದಲ್ಲಿ ನೆಲ್ಲಮಕ್ಕಡ ತಂಡವು ಕಲ್ಲೆಂಗಡ (ನಾಪೋಕ್ಲು) ತಂಡದ ವಿರುದ್ದ 4-0 ಅಂತರದ ಗೆಲುವು ಸಾಧಿಸಿತು. ಮ್ಯಾಕ್ ಮೊಣ್ಣಪ್ಪ ಎರಡು, ಆಶಿಕ್ ಅಪ್ಪಣ್ಣ ಒಂದು ಸೋಮಯ್ಯ ಒಂದು ಗೋಲು ಗಳಿಸಿದರು. ಐದನೇ ಪಂದ್ಯದಲ್ಲಿ ಅಂಜಪರವಂಡ ತಂಡವು ಚೋಡುಮಾಡು ತಂಡದ ವಿರುದ್ದ 4-0 ಅಂತರದ ಗೆಲುವು ಪಡೆಯಿತು. ಅಂಜಪರವಂಡ ತಂಡದ ಹೇಮಂತ್, ದೇವಯ್ಯ, ರಾಬಿನ್‌ ಮುತ್ತಪ್ಪ, ದೀಪಕ್‌ ಸುಬ್ಬಯ್ಯ ರೋಷನ್‌ ಮಾದಪ್ಪ ತಲಾ ಒಂದು ಗೋಲು ಗಳಿಸಿದರು.

ಮೈದಾನ ಎರಡರಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಮಾಳೇಟಿರ ತಂಡವು ಇಟ್ಟೀರ ತಂಡದ ವಿರುದ್ಧ ಸೋಲು ಅನುಭವಿಸಿತು. ಇಟ್ಟೀರ ತಂಡವು 4-0 ಅಂತರದ ಗೆಲುವು ಪಡೆಯಿತು. ಆಟಗಾರರಾದ ಅಚ್ಚಪ್ಪ, ರೋಹನ್, ಚೆಂಗಪ್ಪ, ಭವಿನ್, ತಲಾ ಒಂದು ಗೋಲು ದಾಖಲಿಸಿದರು.

ಮೂರನೇ ಪಂದ್ಯದಲ್ಲಿ ಮೇಕೇರಿರ ತಂಡವು ಮಾಚಂಡ ತಂಡದ ವಿರುದ್ಧ 5-0 ಅಂತರದ ಭರ್ಜರಿ ಗೆಲುವು ಸಾಧಿಸಿತು. ತಂಡದ ಆಟಗಾರರಾದ ನೇಹಲ್, ಚೇತನ್, ನಿತಿನ್, ವಿಜುಚಿಣ್ಣಪ್ಪ ಹಾಗೂ ಅಭಿನವ್ ತಲಾ ಒಂದು ಗೋಲು ಗಳಿಸಿದರು.

ನಾಲ್ಕನೇ ಪಂದ್ಯದಲ್ಲಿ ಚಂದುರ ಮತ್ತು ಮದ್ರೀರ ತಂಡಗಳ ನಡುವೆ ನಡೆದ ನಾಲ್ಕನೇ ಪಂದ್ಯದಲ್ಲಿ ಎರಡೂ ತಂಡಗಳು 1-1 ಅಂತರದ ಸಮಬಲ ಸಾಧಿಸಿದವು. ಬಳಿಕ ಟೈಬ್ರೇಕರ್‌ನಲ್ಲಿ ಚಂದುರ ತಂಡವು 6-5 ಗೋಲುಗಳ ಮುನ್ನಡೆ ಸಾಧಿಸಿ ಮುಂದಿನ ಹಂತ ಪ್ರವೇಶಿಸಿತು. ಪಂದ್ಯದಲ್ಲಿ ಚಂದುರ ತಂಡದ ಪ್ರಧಾನ್‌ ಪೂವಣ್ಣ ಒಂದು ಗೋಲು ಹಾಗೂ ಮದ್ರೀರ ತಂಡದ ಸುನಿಲ್‌ ಸುಬ್ಬಯ್ಯ ಒಂದು ಗೋಲು ದಾಖಲಿಸಿದರು.

ಬಡುವಂಡ ಮತ್ತು ಮಂಡೀರ (ಮಾದಾಪುರ) ತಂಡಗಳ ನಡುವೆ ಮೈದಾನ ಮೂರರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬಡುವಂಡ ತಂಡವು 3-1 ಅಂತರದ ಗೆಲುವು ಸಾಧಿಸಿತು. ಶಿಯಾಕಾವೇರಮ್ಮ, ಭರತ್‌ ಬೋಪಣ್ಣ ಹಾಗೂ ಸಚಿನ್ ತಲಾ ಒಂದು ಗೋಲು ಹೊಡೆದರು. ಮಂಡೀರ ತಂಡದ ಪರ ಶರಿನ್ ಒಂದು ಗೋಲು ದಾಖಲಿಸಿದರು.

ಭಾನುವಾರದ ಪಂದ್ಯಗಳು
ಮೈದಾನ 1
ಬೆಳಿಗ್ಗೆ 9ಕ್ಕೆ ಮೂಕಂಡ - ಕೊಟ್ರಮಂಡ

ಬೆಳಿಗ್ಗೆ 10ಕ್ಕೆ ಕರವಟೀರ - ಕಡೆಮಾಡ

ಬೆಳಿಗ್ಗೆ 11ಕ್ಕೆ ಮುದ್ದಿಯಡ - ಚೋಕಿರ

ಮಧ್ಯಾಹ್ನ 12ಕ್ಕೆ ಕಳ್ಳಿಚಂಡ - ಕೊಂಗಂಡ

ಮಧ್ಯಾಹ್ನ 1ಗಂಟೆಗೆ ಕೇಲೆಟಿರ - ಬೊಳ್ಯಪಂಡ

ಮಧ್ಯಾಹ್ನ 2ಗಂಟೆಗೆ ಕುಯ್ಮಂಡ - ಚಕ್ಕೇರ

ಮೈದಾನ 2

ಬೆಳಿಗ್ಗೆ 9ಕ್ಕೆ ಅರೆಯಡ - ತೀತೀರ (ಹುದಿಕೇರಿ)

ಬೆಳಿಗ್ಗೆ 10ಕ್ಕೆ ಮಂಡೇಟಿರ - ತೆಕ್ಕಡ

11ಕ್ಕೆ ಕಾಳೆಂಗಡ - ಚೆಯ್ಯಂಡ

12ಕ್ಕೆ ಐತಿಚಂಡ - ಚೇನಂಡ

1ಕ್ಕೆ ತಾಪಂಡ - ಮಂಡೀರ (ನೆಲಜಿ)

2ಕ್ಕೆ ಮುಂಡ್ಯೋಳಂಡ - ಪಳಂಗಂಡ

ಮೈದಾನ 3

ಬೆಳಿಗ್ಗೆ 9ಕ್ಕೆ ಕನ್ನಂಡ - ಮಂಡೇಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.