ADVERTISEMENT

ಪ್ರಶಸ್ತಿಯತ್ತ ಸಾಗಿದ ನಡಿಗೆ

ಶೈಕ್ಷಣಿಕ ಅಂಗಳ

ಗುರುದರ್ಶನ್
Published 26 ಸೆಪ್ಟೆಂಬರ್ 2015, 9:31 IST
Last Updated 26 ಸೆಪ್ಟೆಂಬರ್ 2015, 9:31 IST

ಸಿದ್ದಾಪುರ: ವೇಗದ ಓಟ, ಹೈ–ಜಂಪ್‌, ಲಾಂಗ್‌ ಜಂಪ್‌, ಶಾಟ್‌ಪುಟ್‌ ಗಳಂತೆಯೇ ಶಾಲಾ ಕಾಲೇಜುಗಳ ವಾರ್ಷಿಕ ಕ್ರೀಡಾಕೂಟದಲ್ಲಿ  ಈಚೆಗೆ ನಡಿಗೆ ಸ್ಪರ್ಧೆಯು ಪ್ರಮುಖ ಸ್ಥಾನವನ್ನು ಪಡೆದು ಕೊಂಡಿದೆ.

ಅಮ್ಮತ್ತಿ ಗುಡ್‌ ಶೆಫರ್ಡ್‌ ಶಾಲೆಯ ಅರ್ಪಿತ್‌ ಬೋಪಣ್ಣ ಈಚೆಗೆ ನಾಪೋ ಕ್ಲುವಿನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾ ಕೂಟದಲ್ಲಿ ನಡಿಗೆ ಸ್ಫರ್ಧೆಯಲ್ಲಿ ಭಾಗ ವಹಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾನೆ.

ಜೀವನ ಶೈಲಿ ಬದಲಾದಂತೆ ವ್ಯಾಯಾಮಕ್ಕೆ ವಿರಾಮ ಬಿದ್ದು ಸ್ಥೂಲಕಾಯ ಶರೀರ ಬಹುಬೇಗನೇ ದೇಹವನ್ನು ಆಯಾಸಕ್ಕೆ ತಳ್ಳುವ ಸಂಭವಗಳೇ ಹೆಚ್ಚು. ವೇಗದ ಓಟದಂತೆಯೇ ನಡಿಗೆ ಸ್ಪರ್ಧೆಗೂ ನೀತಿ ನಿಯಮಗಳಿದ್ದು ಪ್ರಶಸ್ತಿ ಗೆಲ್ಲುವುದು ಸುಲಭದ ಮಾತಲ್ಲ ಎಂದು ಶಾಲೆಯಲ್ಲಿ ವಿಜೇತರಿಗೆ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸಿಸ್ಟರ್‌ ಇಸಬೆಲ್ಲ ಅಭಿಪ್ರಾಯಪಟ್ಟರು.

ಶಾಲಾ ಕಾಲೇಜುಗಳಲ್ಲಿ ಕೂಡ ಅಥ್ಲೆಟಿಕ್ಸ್‌ ವಿಭಾಗದಲ್ಲಿ ನಡಿಗೆ ಸ್ಪರ್ಧೆಗಳು ತನ್ನ ಸ್ಥಾನವನ್ನು ಬೇರೂರಿಸಿಕೊಂಡಿದೆ. ನಡಿಗೆ ಸ್ಫರ್ಧೆಗಳಲ್ಲಿ 100 ಮೀ, 200 ಮೀ ಹಾಗೂ ಹೆಚ್ಚಿನ ದೂರದ ನಡಿಗೆಗಳು ನಡಿಗೆ ಸ್ಪರ್ಧಾಳುಗಳ ಅಚ್ಚುಮೆಚ್ಚಿನ ವಿಭಾಗ ಎಂದು ಶಾಲೆಯ ದೈಹಿಕ ಶಿಕ್ಷಕ ಹಾಗೂ ನಡಿಗೆ   ತರಬೇತುದಾರ ಗಣೇಶ್‌ ಹೇಳಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.