ADVERTISEMENT

ಮಡಿಕೇರಿ:ಭಾರಿ ಮಳೆಗೆ ಮನೆ ಕುಸಿತ

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 9:25 IST
Last Updated 21 ಜೂನ್ 2011, 9:25 IST

ಮಡಿಕೇರಿ: ಇತ್ತೀಚೆಗೆ ಸುರಿದ ಭಾರಿ ಮಳೆಗೆ ಗಾಳಿಬೀಡು ಸಮೀಪದ ಮೊಣ್ಣಂಗೇರಿ ಗ್ರಾಮದಲ್ಲಿ ಹೆಂಚಿನ ಮನೆಯೊಂದು ಕುಸಿದಿದ್ದು, ಅದೃಷ್ಟವ ಶಾತ್ ಯಾವುದೇ ಪ್ರಾಣಹಾನಿ ಸಂಭವಿ ಸಿಲ್ಲ. ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಮನೆ ನಿರ್ಮಿಸಿಕೊಡಲು ಕ್ರಮಕೈಗೊಳ್ಳು ವುದಾಗಿ ಭರವಸೆ ನೀಡಿದರು.

ಕಳೆದ ಗುರುವಾರ-ಶುಕ್ರವಾರದ ಭಾರೀ ಗಾಳಿ ಮಳೆಗೆ ಗ್ರಾಮದ ನಿವಾಸಿ ಯಾಲದಾಳು ಲೋಕನಾಥ ಅವರ ಮನೆ ಸಂಪೂರ್ಣವಾಗಿ ಕುಸಿದುಬಿದ್ದಿದ್ದು, ಕುಟುಂಬದವರು ಈಗ ತಾತ್ಕಾಲಿಕವಾಗಿ ಇಲ್ಲಿಗೆ ಸಮೀಪದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಸರೆ ಪಡೆದಿದ್ದಾರೆ.

ಶುಕ್ರವಾರ ಬೆಳಿಗ್ಗೆ 10.30ರ ಸುಮಾರಿಗೆ ಮನೆಯೊಡತಿ ಪ್ರೇಮಾ ಅವರು ತಮ್ಮ ಪುತ್ರಿಯ ಜೊತೆ ಸಂತೆಗೆ ಹೊರಡಲು ಹೊರಗೆ ಬಂದತಕ್ಷಣ ಮನೆ ಕುಸಿದುಬಿದ್ದಿತು. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇರಲಿಲ್ಲ.

ಜಿ.ಪಂ. ಅಧ್ಯಕ್ಷರ ಭರವಸೆ: ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಮನೆ ಕಳೆದುಕೊಂಡ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಮಳೆ ಹಾನಿಯಿಂದ ಮನೆ ಕಳೆದು ಕೊಂಡವರಿಗೆ ಸರಕಾರದಿಂದ ಒದಗಿಸ ಲಾಗುವ 10 ಸಾವಿರ ರೂಪಾಯಿ ಪರಿಹಾರದ ಹಣವನ್ನು ಆದಷ್ಟು ಶೀಘ್ರ ಕೊಡಿಸಲು ಪ್ರಯತ್ನಿಸಲಾಗುವುದು. ಇದಲ್ಲದೇ, ಇಂದಿರಾ ಆವಾಜ್ ಯೋಜನೆಗೆ ಈ ಕುಟುಂಬವನ್ನು ಆಯ್ಕೆ ಮಾಡಿ, ಹೊಸ ಮನೆ ನಿರ್ಮಿಸಿಕೊಡಲು ನೆರವಾಗುವುದಾಗಿ ಅವರು ಭರವಸೆ ನೀಡಿದರು.

ಈಗಾಗಲೇ ತಹಶೀಲ್ದಾರ್ ಹಾಗೂ ಇತರ ಕಂದಾಯ ಇಲಾಖೆಯ ಅಧಿಕಾರಿ ಗಳ ಜತೆ ಸಮಾಲೋಚಿಸಲಾಗಿದ್ದು, ಮುಂದಿನ ಆರು ತಿಂಗಳ ಒಳಗೆ ಈ ಸ್ಥಳದಲ್ಲಿ ಹೊಸ ಮನೆ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮನೆಯೊಡತಿ ಪ್ರೇಮಾ ಲೋಕನಾಥ್, ತಾವು ಶುಕ್ರವಾರ ಬೆಳಿಗ್ಗೆ ಸಂತೆಗೆ ಹೊರಟ ಸಂದರ್ಭದಲ್ಲಿ ಮನೆ ಕುಸಿದ ಪರಿಯನ್ನು ಸ್ಥಳಕ್ಕೆ ತೆರಳಿದ ಮಾಧ್ಯಮದವರೊಂದಿಗೆ ಹಂಚಿ ಕೊಂಡರು. ತಮಗೆ ಎರಡು ಹೆಣ್ಣು ಹಾಗೂ ಒಂದು ಗಂಡು ಮಕ್ಕಳಿದ್ದು, ಕೃಷಿಯೊಂದನ್ನೇ ಜೀವನಕ್ಕೆ ನೆಚ್ಚಿಕೊಂಡಿ ವುದಾಗಿ ಅಸಹಾಯಕತೆಯನ್ನು ಹೇಳಿಕೊಂಡರು.

ಇದೀಗ ವಾಸಿಸಲು ಮನೆ ಇಲ್ಲದೆ ಇರುವುದರಿಂದ ಸಮೀಪದ ಸರಕಾರಿ ಶಾಲೆಯಲ್ಲಿ ತಾತ್ಕಾಲಿಕ ವಾಸ್ತವ್ಯ ಹೂಡಿರುವುದಾಗಿಯೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.