ADVERTISEMENT

ಮೂಲ ವಿಜ್ಞಾನಕ್ಕೆ ಮಹತ್ವ ನೀಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 8:11 IST
Last Updated 10 ಡಿಸೆಂಬರ್ 2013, 8:11 IST

ಕುಶಾಲನಗರ: ಮೂಲ ವಿಜ್ಞಾನದ ಬಗ್ಗೆ ಇಂದಿನ ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸಲು ವಿದ್ಯಾರ್ಥಿ ದೆಸೆಯಿಂದಲೇ ಶಿಕ್ಷಕರು ಪ್ರಯತ್ನಿಸಬೇಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲ ದೊಡ್ಡಮಲ್ಲಪ್ಪ ಹೇಳಿದರು.

ಸಮೀಪದ ಕೂಡಿಗೆ ಡಯಟ್ ಸಭಾಂಗಣದಲ್ಲಿ ಸೋಮವಾರ ನಡೆದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕೇವಲ ಎಂಜಿನಿಯರ್ ಅಥವಾ ಡಾಕ್ಟರ್ ವೃತ್ತಿಗೆ ಮಹತ್ವ ನೀಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಶಿಕ್ಷಣ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಪ್ಪ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು.

ವಸ್ತು ಪ್ರದರ್ಶನದಲ್ಲಿ ಮೂರು ತಾಲ್ಲೂಕುಗಳ 50 ವಿದ್ಯಾರ್ಥಿಗಳು ಮತ್ತು 18 ಶಿಕ್ಷಕರು ಭಾಗವಹಿಸಿದ್ದರು. ಸೌರಶಕ್ತಿ ಚಾಲಿತ ಯಂತ್ರಗಳು, ಪರಿಸರ ಸಮತೋಲನದ ಚಿತ್ರಣ, ನೀರು ಶುದ್ಧೀಕರಿಸುವ ಯಂತ್ರ, ಬೈಜಿಕ ಅನಿಲ ಉತ್ಪಾದನೆ ಮೊದಲಾದ ನೂರಾರು ಮಾದರಿಗಳನ್ನು ಪ್ರದರ್ಶನಕ್ಕಿಟ್ಟಿದ್ದರು.

ಉಪನ್ಯಾಸಕ ಸಲೀಂ ಪಾಷಾ, ವಿಷಯ ಪರಿವೀಕ್ಷಕ ರತ್ನಾಕರ್, ಚಂಗಪ್ಪ, ದೇವ ನಾಯಕ್, ಉಪನ್ಯಾಸಕಿ ಸಾವಿತ್ರಿ ಇದ್ದರು. ಡಯಟ್ ಉಪನ್ಯಾಸಕ ರಮೇಶ್ ವಸ್ತು ಪ್ರದರ್ಶನ ಸಂಯೋಜಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.