ADVERTISEMENT

ರಸ್ತೆ ವಿಸ್ತರಣೆಯಲ್ಲಿ ತಾರತಮ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2014, 9:50 IST
Last Updated 5 ಮಾರ್ಚ್ 2014, 9:50 IST
ಕುಶಾಲನಗರ ಪಟ್ಟಣದಲ್ಲಿ ಕೊಣನೂರು ಮಾಕುಟ್ಟ ಹೆದ್ದಾರಿ ವಿಸ್ತರಣೆಯಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ಕಾವೇರಿ ಸೇನೆ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಕುಶಾಲನಗರ ಪಟ್ಟಣದಲ್ಲಿ ಕೊಣನೂರು ಮಾಕುಟ್ಟ ಹೆದ್ದಾರಿ ವಿಸ್ತರಣೆಯಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ಕಾವೇರಿ ಸೇನೆ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.   

ಕುಶಾಲನಗರ: ಕೊಣನೂರು– ಮಾಕುಟ್ಟಗಳ ನಡುವೆ ನಡೆಯುತ್ತಿರುವ ರಾಜ್ಯ ಹೆದ್ದಾರಿ ವಿಸ್ತರಣೆಯ ಸಂದರ್ಭದಲ್ಲಿ ಕೆಆರ್‌ಡಿಸಿಎಲ್ ಅಧಿಕಾರಿಗಳು ತಾರತಮ್ಯ ಎಸಗಿದ್ದಾರೆ ಎಂದು ಆರೋಪಿಸಿ ಪಟ್ಟಣದಲ್ಲಿ ಕಾವೇರಿ ಸೇನೆ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಪಟ್ಟಣದ ಸೋಮೇಶ್ವರ ದೇವಾಲಯದ ವೃತ್ತದಲ್ಲಿ ಕಾವೇರಿ ಸೇನೆ ನೇತೃತ್ವದಲ್ಲಿ ಐದು ನಿಮಿಷಗಳ ಕಾಲ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿ­ದರು. ಬಳಿಕ ಕೆಆರ್‌ಡಿಸಿಎಲ್ ಅಧಿಕಾರಿ­ಗಳ ವಿರುದ್ಧ ಧಿಕ್ಕಾರ ಕೂಗಿದರು. ಅಲ್ಲದೆ, ಅದೇ ರಸ್ತೆಯಲ್ಲಿ ಮಾರುಕಟ್ಟೆ­ವರೆಗೆ ಮೆರವಣಿಗೆ ನಡೆಸಿದರು.

ಕಾವೇರಿಸೇನೆ ಜಿಲ್ಲಾ ಸಂಚಾಲಕ ರವಿಚಂಗಪ್ಪ ಮಾತ­ನಾಡಿ, ಕೊಣನೂರು– ಮಾಕುಟ್ಟ ಹೆದ್ದಾರಿ ವಿಸ್ತರಣೆ ಸಂದರ್ಭದಲ್ಲಿ ಶಿರಂಗಾಲ­ದಿಂದ ಕುಶಾಲನಗರದ ನಡುವೆ ಕಟ್ಟಡಗಳನ್ನು ತೆರವುಗೊಳಿಸು­ವಲ್ಲಿ ಅಧಿಕಾರಿಗಳು ತಾರತಮ್ಯ ಎಸಗಿದ್ದಾರೆ ಎಂದು ಆರೋಪಿಸಿದರು.
ಬಡವರು ಮತ್ತು ಅಮಾಯಕರ ಕಟ್ಟಡಗಳನ್ನು ಬಲವಂತವಾಗಿ ತೆರವು­ಗೊಳಿಸಲಾಗಿದೆ. ಆದರೆ, ಅಧಿಕಾರ ಉಳ್ಳವರ ಕಟ್ಟಡಗಳನ್ನು ತೆರವುಗೊಳಿಸು­ವುದರ ಬದಲಾಗಿ ಅವರಿಂದಲೇ ಲಂಚಪಡೆದು ಕಟ್ಟಡಗಳನ್ನು ಹಾಗೇ ಉಳಿಸಿ ರಸ್ತೆಯನ್ನು ಕಿರಿದಾಗಿ ಮಾಡಲಾಗಿದೆ ಎಂದು ದೂರಿದರು.

ತಕ್ಷಣವೇ ಕೆಆರ್‌ಡಿಸಿಎಲ್ ಅಧಿಕಾರಿ­ಗಳು ಇಂತಹ ತಾರತಮ್ಯವನ್ನು ಕೈಬಿಟ್ಟು ಕಿರಿದಾಗಿ ಮಾಡಿರುವ ರಸ್ತೆಗಳನ್ನು ಸರಿಪಡಿಸಿ ಊರಿನ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಒತ್ತಾಯಿಸಿ­ದರು. ಈ ಕುರಿತು ಅಧಿಕಾರಿಗಳು ಎಚ್ಚೆತ್ತುಕೊಳ್ಳ­ದಿದ್ದಲ್ಲ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ರಾಮು, ಮಂಜು ಇತರರು ಭಾಗವಹಿಸಿದ್ದರು.

7ರಿಂದ ವಾರ್ಷಿಕೋತ್ಸವ
ಮಡಿಕೇರಿ: -ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಮಾರ್ಚ್‌ 7 ಮತು 8 ರಂದು 65ನೇ ಕಾಲೇಜು ಕ್ರೀಡಾ, ಪ್ರತಿಭಾ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದೆ.ಮಾ.7ರಂದು ಬೆಳಗ್ಗೆ 10.30ಕ್ಕೆ ಕ್ರೀಡೆ ಹಾಗೂ ಪ್ರತಿಭೋತ್ಸವ ಕಾರ್ಯಕ್ರಮ ನಡೆಯಲಿದೆ.

ಕೆ.ಎಸ್. ದೇವಯ್ಯ, ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪುಷ್ಪ ಕುಟ್ಟಣ್ಣ ಇತರರು ಪಾಲ್ಗೊಳ್ಳಲಿದ್ದಾರೆ. 8ರಂದು ಕಾಲೇಜಿನ 65ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾಧಿಕಾರಿ ಅನುರಾಗ್ ತಿವಾರಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಎನ್.ಎ. ಅಪ್ಪಯ್ಯ, ಕಾಲೇಜಿನ ಪ್ರಾಂಶುಪಾಲರಾದ ಡಾ.ಪಾರ್ವತಿ ಅಪ್ಪಯ್ಯ  ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT