ADVERTISEMENT

ವಿಶಿಷ್ಟ ಆಚರಣೆಗಳು ಕಣ್ಮರೆ: ವಿಷಾದ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2012, 5:55 IST
Last Updated 4 ಆಗಸ್ಟ್ 2012, 5:55 IST
ವಿಶಿಷ್ಟ ಆಚರಣೆಗಳು ಕಣ್ಮರೆ: ವಿಷಾದ
ವಿಶಿಷ್ಟ ಆಚರಣೆಗಳು ಕಣ್ಮರೆ: ವಿಷಾದ   

ಮಡಿಕೇರಿ: ಇಂದಿನ ಆಧುನಿಕತೆಯ ಭರಾಟೆಯಲ್ಲಿ ಕೊಡಗಿನ ವಿಶಿಷ್ಟ ಆಚರಣೆಗಳು, ಹಬ್ಬ ಹರಿದಿನಗಳು ಕಣ್ಮರೆಯಾಗುತ್ತಿವೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ವಿಷಾದ ವ್ಯಕ್ತಪಡಿಸಿದರು.

ಇಲ್ಲಿಗೆ ಸಮೀಪದ ಖಾಸಗಿ ಹೋಟೆಲ್‌ವೊಂದರಲ್ಲಿ ಶುಕ್ರವಾರ ನಡೆದ `ಕಕ್ಕಡ ಪದಿನೆಟ್ಟ್~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಮ್ಮ ಸಂಘಟನೆಯು ಹಲವು ವರ್ಷಗಳಿಂದ ಕೊಡಗಿನ ಸಾಂಪ್ರದಾಯಿಕ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದೆ. ಇದು ಮುಂದಿನ ಪೀಳಿಗೆಯವರಿಗೆ ರವಾನೆಯಾಗಬೇಕು ಎಂದು ಅವರು ಹೇಳಿದರು.

ಗದ್ದೆಯಲ್ಲಿ ಸಾಂಪ್ರದಾಯಕವಾಗಿ ಸಸಿ ನಾಟಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 18 ಬಗೆಯ ಔಷಧಿಗಳಿಂದ ಕೂಡಿದ ಮದ್ದುಪಾಯಸ, ಕಕ್ಕಡ ಕೋಳಿಯಿಂದ ತಯಾರಿಸಿದ ಖಾದ್ಯಗಳನ್ನು ಸೇವಿಸಲಾಯಿತು.
 
ಬಾಚಮಂಡ ರಾಜಾಪೂವಣ್ಣ, ಅಪ್ಪಚ್ಚೀರ ರಮ್ಮಿ ನಾಣಯ್ಯ, ಅಜ್ಜಿಕುಟೀರ ಲೋಕೇಶ್, ಪುಲ್ಲೇರ ಕಾಳಪ್ಪ, ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಣ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.