ADVERTISEMENT

ಶಾಲಾಭಿವೃದ್ಧಿಯಲ್ಲಿ ರಾಜಕೀಯ ಬೇಡ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 10:20 IST
Last Updated 1 ಜೂನ್ 2011, 10:20 IST

ವಿರಾಜಪೇಟೆ: ಯಾವುದೇ ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಬೆರತರೆ ಅಭಿವೃದ್ದಿ ಕುಂಠಿತಗೊಳ್ಳುತ್ತದೆ. ಆಡಳಿತ ಮಂಡಳಿಗಳು ಪರಸ್ಪರ ಸಾಮರಸ್ಯದಿಂದ ಶಾಲೆಯ ಅಭಿವೃದ್ಧಿಗಾಗಿ ದುಡಿಯ ಬೇಕು ಎಂದು ಜಿಲ್ಲಾ ಪಂಚಾಯಿತಿಯ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಕಾಂತಿಬೆಳ್ಳಿಯಪ್ಪ ಹೇಳಿದರು.

ವಿರಾಜಪೇಟೆ ಬಳಿಯ ಬಿಳುಗುಂದ ಸಂಯುಕ್ತ ಪ್ರೌಢಶಾಲೆಗೆ ಮಂಗಳವಾರ ಭೇಟಿ ನೀಡಿದ ಅವರು, ಶಾಲೆಯ ಮುಖ್ಯೋಪಾಧ್ಯಾಯರು, ಆಡಳಿತ ಮಂಡಳಿ ಹಾಗೂ ಶಾಲಾಭಿವೃದ್ಧಿ ಸಮಿತಿ ಯೊಳಗಿನ ಮುಸುಕಿನ ಗುದ್ದಾಟವನ್ನು ಪರೋಕ್ಷವಾಗಿ ಟೀಕೆ ಮಾಡಿದರು.

ರಾಜಕೀಯ ರಹಿತವಾಗಿ ಶಾಲಾ ಆಡಳಿತ ಮುಂದುವರೆಯಬೇಕು. ಅಭಿ ವೃದ್ಧಿ ಕೆಲಸಗಳಿಗೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ರಾಜಕೀಯವಾಗಿ ಆಡಳಿತದಿಂದ ಮುಗ್ಧ ವಿದ್ಯಾರ್ಥಿಗಳಿಗೆ, ಪ್ರಾಮಾಣಿಕ ಶಿಕ್ಷಕರಿಗೆ ತೊಂದರೆ ಆಗ ಬಾರದು. ಪರಿಸ್ಥಿತಿ ವಿಕೋಪಕ್ಕೆ ತೆರಳುವ ಮೊದಲೇ ಪರಸ್ಪರ ಸೌಹಾರ್ದತೆ ಕಾಪಾಡಿಕೊಂಡು ಅಭಿವೃದ್ಧಿಗೆ ಉತ್ತೇ ಜನ ನೀಡಬೇಕು ಎಂದು ತಿಳಿಸಿದರು.

ಬಿಳುಗುಂದ ಗ್ರಾಮದ ಶಾಲೆಗೆ ಕಾಂತಿಬೆಳ್ಳಿಯಪ್ಪ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್, ಮುಖ್ಯೋ ಪಾಧ್ಯಾಯರ ವಿರುದ್ಧ ದೂರಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಕವಿತಾ ಅವರನ್ನು ಶಾಲೆಯ ಯಾವುದೇ ಸಭೆ ಸಮಾರಂಭಗಳಿಗೆ ಆಹ್ವಾನಿಸದೇ ಕಡೆಗಣಿಸಲಾಗುತ್ತಿದೆ. ಅಭಿವೃದ್ಧಿಯ ವಿಷಯದಲ್ಲಿ ಎಲ್ಲರನ್ನು ಕಡೆಗಣಿಸಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳ ಲಾಗುತ್ತಿದೆ. ಆಡಳಿತದಲ್ಲಿಯೇ ರಾಜ ಕೀಯ ಬೆರೆಯುತ್ತಿದೆ. ಮುಖ್ಯೋಪಾ ಧ್ಯಾಯರನ್ನು ತಕ್ಷಣ ಇಲ್ಲಿಂದ ವರ್ಗಾ ಯಿಸದಿದ್ದರೆ ಗ್ರಾಮಸ್ಥರ ಸಹಕಾರ ದೊಂದಿಗೆ ಉಗ್ರ ಹೋರಾಟ ನಡೆಸು ವುದಾಗಿ ಎಚ್ಚರಿಸಿದರು.

ಪ್ರೌಢಶಾಲೆಯ ನೂತನ ಕಟ್ಟಡಕ್ಕಾಗಿ ದಾನಿಗಳಿಂದ ಹಣ ಸಂಗ್ರಹಿಸಲಾಗಿದೆ. ಜತೆಗೆ ಸರ್ಕಾರ ಹಣ ಮಂಜೂರು ಮಾಡಿದ್ದರೂ ಕಟ್ಟಡದ ಗುದ್ದಲಿ ಪೂಜೆಗೆ ದಾನಿಗಳನ್ನು ಆಹ್ವಾನಿಸದೇ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದರಿಂದ ಕಟ್ಟಡದ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಕೆಲಸ ಸ್ಥಗಿತ ಗೊಂಡಿದೆ. ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈ ತನಕ  ಶಾಲಾ ಭಿವೃದ್ಧಿ ಸಮಿತಿ ಅಧ್ಯಕ್ಷರಿಗೆ ಯಾವುದೇ ಮಾಹಿತಿ ನೀಡಲಿಲ್ಲ ಎಂದು ಸಂತೋಷ್ ದೂರಿದರು.

ಬಿಳುಗುಂದ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಐನಂಡ ಕಿರಣ್, ಕನ್ನಡಿಯಂಡ ಸುಬೇರ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುಸ್ತಾಫ, ಕೆ.ಪ್ರಕಾಶ್, ಎಂ.ಕಾಳಪ್ಪ, ಕಲಿಮುಲ್ಲಾ ಖಾನ್ ಮತ್ತಿತರರು ಹಾಜರಿದ್ದು ಬಿಳುಗುಂದ ಪ್ರೌಢಶಾಲೆಯ ಆಡಳಿತ ಹಾಗೂ ಅಭಿವೃದ್ದಿಯ ಮಾಹಿತಿ ನೀಡಿದರು.
ಪ್ರೌಢಶಾಲೆಯ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿರುವ ಕುರಿತು ಕಡತ ಹಾಗೂ ದೂರು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಕಾಂತಿಬೆಳ್ಳಿಯಪ್ಪ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.