ADVERTISEMENT

ಸಂಭ್ರಮದ ಕೊಡವಾವೆು ನೃತ್ಯ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 7:04 IST
Last Updated 12 ಸೆಪ್ಟೆಂಬರ್ 2013, 7:04 IST

ಗೋಣಿಕೊಪ್ಪಲು:  ವೈವಿಧ್ಯಮಯ ಸಂಸ್ಕೃತಿ ಹಾಗೂ ಭಾಷೆಯನ್ನು ಬಿಂಬಿ ಸುವ ಕೊಡವ ನಾಡಿನ ಕೊಡವಾಮೆ ಸಾಂಸ್ಕೃತಿಕ ಕಾರ್ಯಕ್ರಮ ಈಚೆಗೆ ಬೆಕ್ಕೆಸೊಡ್ಲೂರಿನಲ್ಲಿ ವಿಜೃಂಭಣೆಯಿಂದ ನಡೆಯಿತು. 

ಕೊಡವ  ಸಾಂಪ್ರದಾಯಕ ಜಾನಪದ ನೃತ್ಯ,  ವಾಲಗ ನೃತ್ಯ ಹಾಗೂ ವಿವಿಧ ಬಗೆಯ ಕ್ರೀಡಾ ಕೂಟದಲ್ಲಿ ಪಾಲ್ಗೊಂಡಿದ್ದ ಜನರು ಕುಣಿದು ಕುಪ್ಪಳಿಸಿ ಆನಂದಿಸಿದರು.

ಹಿರಿಯರು, ವಹಿಳೆಯರು, ಮಕ್ಕಳು ಎಂಬ ಭೇದವಿಲ್ಲದೇ ಎಲ್ಲರೂ ಪಾಲ್ಗೊಂಡಿದ್ದರು. ತಮ್ಮ ಹೆಮ್ಮೆಯ ಸಂಸ್ಕೃತಿಯನ್ನು ಯುವ ಜನಾಂಗ ಉಳಿಸಿ  ಬೆಳೆಸಿಕೊಂಡು ಹೋಗಬೇಕು ಎಂಬ ಉದ್ದೇಶದಿಂದ ಎಲ್ಲರೂ ಮುಕ್ತವಾಗಿ ಪಾಲ್ಗೊಂಡಿದ್ದರು. ಕೊಡವ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ ತೊಟ್ಟು ಕಂಗೊಳಿಸಿದರು. ತೆಂಗಿನ  ಕಾಯಿಗೆ ಗುಂಡು ಹೊಡೆ ಯವ ಸ್ಪರ್ಧೆಯಲ್ಲಿ  ಪುರುಷರೊಂದಿಗೆ ಮಹಿಳೆಯರು ಸಾಥ್ ನೀಡಿದರು. 

ಮೂರು  ತಿಂಗಳ ಕಾಲ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಜನತೆ ನಾಟಿ ಕೆಲಸ  ಮುಗಿಸಿ ಕೈಲ್ ಮುಹೂರ್ತ ಹಬ್ಬದಿಂದ ಸ್ವಲ್ಪ ಮಟ್ಟಿಗೆ ಉಲ್ಲಾಸಿತರಾಗಿದ್ದರು. ಹೀಗಾಗಿ ಕೈಲ್ ಕ್ರೀಡಾ ಕೂಟ ನೆನಪಿಸುವ ಕೊಡವಾವೆು ಆಚರಿಸಿ ಖುಷಿಪಟ್ಟರು.

ನಿವೃತ್ತ ಮೇಜರ್ ಬಿದ್ದಂಡ ನಂಜಪ್ಪ ಮುಗಿಲ ಕಡೆಗೆ ಗುಂಡು ಹಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ದರು. ಬಳಿಕ ಮಾತನಾಡಿದ ಅವರು ಕೊಡವ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪಣತೊಡಬೇಕಾಗಿದೆ. ಕೊಡವ ನೆಲ, ಜಲ ಉಳಿದರೆ ಸಂಸ್ಕೃತಿಯು ಉಳಿಯಲಿದೆ. ಈ ಬಗ್ಗೆ  ಜನಜಾಗೃತಿ ಮೂಡಿಸುವ ಅಗತ್ಯ ಇದೆ ಎಂದು ಹೇಳಿದರು.

ನಿವೃತ್ತ  ಪ್ರಾಂಶುಪಾಲ ಪ್ರೊ. ಇಟ್ಟೀರ ಬಿದ್ದಪ್ಪ,  ಗೋಣಿಕೊಪ್ಪಲು ಕಾವೇರಿ ವಿದ್ಯಾಸಂಸ್ಥೆ ಉಪಾಧ್ಯಕ್ಷ ಅಜ್ನಿಕಂಡ ಟಿ. ಭೀಮಯ್ಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ ವಿವಿಧ ವಿಷಯಗಳ ಬಗ್ಗೆ ಪ್ರಬಂಧ ಮಂಡಿಸಿದರು.

ಮುಖಂಡರಾದ ಮಚ್ಚಮಾಡ ವಿನೋದ್, ತಾಣಚ್ಚೀರ ಮುತ್ತಣ್ಣ, ಪೋರಂಗಡ ಬೆಳ್ಳಿಯಪ್ಪ, ತೀತಮಾಡ ಅರ್ಜುನ, ಮಚ್ಚಾಮಾಡ ನಂಜಪ್ಪ, ಮಾಚಿಮಾಡ ರವೀಂದ್ರ ಮುಂತಾದವರು ಹಾಜರಿದ್ದರು.

ವಿರಾಜಪೇಟೆ ತೂಕ್‌ಬೊಳಕ್ ಕಲೆ ಕ್ರೀಡೆ ಸಾಹಿತ್ಯ ಅಕಾಡೆಮಿ ತಂಡ, ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯ, ಟಿ.ಶೆಟ್ಟಿಗೇರಿ  ರೂಟ್ಸ್ ಶಾಲೆ ವಿದ್ಯಾರ್ಥಿಗಳ ನೃತ್ಯ, ಸುಳ್ಳಿಮಾಡ ಕುಟುಂಬದ ಸದಸ್ಯರ ಉಮ್ಮತ್ತಾಟ್ ನೃತ್ಯ ಆಕರ್ಷಕವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.